ರೈಲು ಮಾರ್ಗಗಳನ್ನು ಪುನಃ ಪ್ರಾರಂಭಿಸುವಂತೆ – ಕೇಂದ್ರ ಹಣಕಾಸು ಸಚಿವರಿಗೆ ಮನವಿ.
ಮಾನ್ವಿ ಅ.17





ರಾಯಚೂರು ಜಿಲ್ಲೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಆಗಮಿಸಿದ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರಿಗೆ ಸಿಂಧನೂರು ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ಮಾನ್ವಿ ತಾಲೂಕಿನ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಮಾನ್ವಿ ಮಂಡಲ ಬಿ.ಜೆ.ಪಿ. ಪಕ್ಷದ ನಿಯೋಗದೊಂದಿಗೆ ತೆರಳಿ ಬಿ.ಜೆ.ಪಿ ಮಾನ್ವಿ ಮಂಡಲ ಮಾಜಿ ಅಧ್ಯಕ್ಷರಾದ ಜೆ. ಸುಧಾಕರ್ ಮನವಿ ಸಲ್ಲಿಸಿ ಮಾತನಾಡಿ ಆಂಧ್ರ ಪ್ರದೇಶದ ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಮತ್ತು ಕೃಷ್ಣ ಜಿಲ್ಲೆಗಳಿಂದ ಸುಮಾರು 5 ಲಕ್ಷ ಜನರು ಕಳೆದ 60 ವರ್ಷಗಳಿಂದ ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ಮಸ್ಕಿ, ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕುಗಳಲ್ಲಿ ಹಾಗೂ ಯಾದಗಿರಿ ಜಿಲ್ಲೆಯ ಯಾದಗಿರಿ, ಶೋರಾಪುರ ಮತ್ತು ಶಹಾಪುರ ತಾಲೂಕುಗಳು, ಕೊಪ್ಪಳ ಜಿಲ್ಲೆಯ ಕಾರಟಗಿ, ಗಂಗಾವತಿ ತಾಲೂಕುಗಳಲ್ಲಿ ನೆಲೆಸಿ ಕೃಷಿ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ತಮ್ಮನು ತೊಡಗಿಸಿ ಕೊಂಡಿದ್ದಾರೆ ಆದರೆ ಇವರು ತಮ್ಮ ಸಂಬಂಧಿಗಳ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಹೋಗುವುದಕ್ಕೆ ಹಾಗೂ ತಮ್ಮ ಕುಟುಂಬದ ಉಳಿದ ಸದಸ್ಯರನ್ನು ಭೇಟಿ ಮಾಡುವುದಕ್ಕೆ 8 ನೂರು ಕಿ.ಮಿ ದೂರ ಇರುವ ಆಂಧ್ರ ಪ್ರದೇಶದ ವಿವಿಧ ಪಟ್ಟಣಗಳಿಗೆ ನಿರಂತರವಾಗಿ ಹೋಗ ಬೇಕಾಗುತ್ತದೆ ಹಾಗೂ ಅಲ್ಲಿನ ಜನರು ಇಲ್ಲಿಗೆ ಬರುವುದಕ್ಕೆ ಆನುಕೂಲವಾಗಿದ್ದ ರಾಜ್ಯದ ರಾಯಚೂರು ನಗರದಿಂದ ಆಂಧ್ರ ಪ್ರದೇಶದ ಕಾಕಿನಾಡ ನಡುವೆ ಸಂಚರಿಸುವ 07246 ಸಂಖ್ಯೆಯ ರೈಲು ಕೆಲವು ತಿಂಗಳಿಂದ ಸಂಚಾರ ನಡೆಸುತ್ತಿಲ್ಲ ಅದ್ದರಿಂದ ರೈಲು ಸಂಖ್ಯೆ 07246 & 07245 ಅನ್ನು ಮಂತ್ರಾಲಯದಿಂದ ಪುನರಾರಂಭಿಸಬೇಕು. ಆಂಧ್ರ ಪ್ರದೇಶದ ಮಂತ್ರಾಲಯ ರೈಲು ನಿಲ್ದಾಣದಿಂದ ಮಚಲಿ ಪಟ್ಟಣಕ್ಕೆ ಸಂಚರಿಸುತ್ತಿದ್ದ 07067 ಸಂಖ್ಯೆಯ ರೈಲು ಮತ್ತು ಪ್ರತಿಯಾಗಿ 07068 ಸಂಖ್ಯೆಯ ರೈಲು ಸಹ ಕೆಲವು ದಿನಗಳಿಂದ ಸಂಚಾರ ಸ್ಥಗಿತ ಗೊಂಡಿದೆ ಮಹೇಬೂಬ್ ನಗರದಿಂದ ವಿಶಾಖ ಪಟ್ಟಣಕ್ಕೆ 12862 ಮತ್ತು 12861 ಸಂಖ್ಯೆಯ ರೈಲು ಇದ್ದು, ಈ ರೈಲನ್ನು ರಾಯಚೂರು ರೈಲು ನಿಲ್ದಾಣದ ವರೆಗೆ ರೈಲು ಸಂಚಾರವನ್ನು ವಿಸ್ತರಿಸಿದಲ್ಲಿ ಈ ಭಾಗದ ಪ್ರವಾಸಾಂಧ್ರ ನಿವಾಸಿಗಳಿಗೆ ವೃದ್ದರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಸಂಚರಿಸುವುದಕ್ಕೆ ಅನುಕೂಲವಾಗುತ್ತದೆ ಅದ್ದರಿಂದ ಸಾರ್ವಜನಿಕ ಹಿತಾಸಕ್ತಿಗಾಗಿ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜಿ ಅವರೊಂದಿಗೆ ನಮ್ಮ ಬೇಡಿಕೆಗಳ ಕುರಿತು ಚರ್ಚೆ ನಡೆಸಿ ಅನುಕೂಲ ಮಾಡಿ ಕೊಡುವಂತೆ ಮನವಿ ಮಾಡಿ ಕೊಂಡರು.ಮಾನ್ವಿ ಬಿ.ಜೆ.ಪಿ ಮಂಡಲ ಉಪಾಧ್ಯಕ್ಷರಾದ ವಿಶ್ವನಾಥ ಬಿ ನಂದಿಹಾಳ್, ತಾ. ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಮಾರಸ್ವಾಮಿ ಮೇದಾ, ಕಿಸಾನ್ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಿವಲಿಂಗಯ್ಯ ಸ್ವಾಮಿ, ಕಿಸಾನ್ ಮೋರ್ಚಾ ತಾ. ಕಾರ್ಯದರ್ಶಿ ಜಿ.ಉಮಾಪತಿ ನಾಯಕ್, ಮುಖಂಡರಾದ ಗೋಪಾಲ ಇಭ್ರಮಪುರ ಸೇರಿದಂತೆ ಇನ್ನಿತರರು ಇದ್ದರು.
ಬಾಕ್ಸ್ ನ್ಯೂಸ್:
ಸಿಂಧನೂರು ಪಟ್ಟಣದಲ್ಲಿ ಬಿಜೆಪಿ ಮಾನ್ವಿ ಮಂಡಲ ವತಿಯಿಂದ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ