ಬೆಳೆ ಹಾನಿ ಪ್ರದೇಶಕ್ಕೆ – ಎಸಿ ಭೇಟಿ.
ತಾರಾಪೂರ ಸ.09





ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಭೀಮಾ ನದಿಯ ತೀರದ ಗ್ರಾಮಗಳಿಗೆ ಇಂಡಿ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಭೇಟಿ ನೀಡಿ ಬೆಳೆ ಹಾನಿ ಪ್ರದೇಶವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ತಾರಾಪೂರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಮಳೆಯಿಂದ ಮತ್ತು ಭೀಮಾನದಿಯ ಪ್ರವಾಹದಿಂದ ಹಾನಿ ಗೊಳಗಾದ ತೊಗರಿ, ಹತ್ತಿ, ಹೆಸರು, ಉದ್ದು, ಮುಂತಾದ ಬೆಳೆಗಳ ಸಮೀಕ್ಷೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿ ಈ ಭಾಗದಲ್ಲಿ ಆಗಿರುವ ಬೆಳೆ ಹಾನಿಯ ಪರಿಣಾಮವನ್ನು ಅರ್ಥೈಸಿ ಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕಾಗಿ ಆಗಮಿಸಿರುವುದಾಗಿ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಲಮೇಲ ತಾಲೂಕು ದಂಡಾಧಿಕಾರಿ ಧನಪಾಲ ಶೆಟ್ಟಿ, ಕಂದಾಯ ನಿರೀಕ್ಷಕ ಎಂ.ಎ ಅತ್ತಾರ್, ಗ್ರಾಮ ಲೆಕ್ಕಾಧಿಕಾರಿ ಬಿರಾದಾರ, ಪಿ.ಡಿ.ಓ ಶರಣ ಗೌಡ ಕಡ್ಲೆವಾಡ, ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಪ್ರತಿನಿಧಿಯಾದ ಶರಣಪ್ಪ ನಾಟೀಕಾರ ಹಾಗೂ ಭೀಮಾ ನದಿ ದಂಡೆಯ ತಾರಾಪುರ ಗ್ರಾಮದ ರೈತರಾದ ಗಿರಿಮಲ್ಲ ಕಿಣಗಿ, ಶಂಕರಗೌಡ ಪಾಟೀಲ, ಬೀಮಾಶ್ಯಾ ವಡ್ಡರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ