ಕೇಂದ್ರ ಬಜೆಟ್ ನಿರಾಶಾದಾಯಕ ಕಾಂಗ್ರೇಸ್ ಪಕ್ಷದ – ಮುಖಂಡ ಪ್ರವೀಣ ನಾಯಿಕ.
ಮದಭಾವಿ ಜು.25





2024.ರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಶೀತಾರಾಮ ಮಂಡನೆ ಮಾಡಿದ ಬಜೆಟ್ ಅತ್ಯಂತ ನಿರಾಶಾ ದಾಯಕ ಬಜೆಟ್ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಕಾಂಗ್ರೇಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಹೇಳಿದರು.ಬಿಜೆಪಿ ಪಕ್ಷ ಆಡಳಿತ ಇಲ್ಲದ ರಾಜ್ಯದಲ್ಲಿ ಬಜೆಟ್ ದಲ್ಲಿ ಕಡೆಗಣಿಸಿದ್ದು ತಪ್ಪು ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಸದರನ್ನು ಆಯ್ಕೆ ಮಾಡಿ ಕೊಟ್ಟಿದ್ದಾರೆ ಅನ್ನುವುದು ಮರೆಯಬಾರದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಕೇಂದ್ರ ಬಜೆಟ್ ಜನಪರ ರೈತರ ಪರವಾಗಿ ಇರುತ್ತದೆ ಅಂತ ಜನರು ಇಟ್ಟ ನಂಬಿಕೆ ಹುಸಿಯಾಗಿದೆ ಉದ್ಯೋಗ ಸೃಷ್ಟಿ ಮತ್ತು ಅದಕ್ಕೆ ಸಂಬಂದಿಸಿದ ವಿಷಯದಲ್ಲಿ ಬಜೆಟನಲ್ಲಿ ಏನು ಹುರಳಿಲ್ಲ ಕೇಂದ್ರ ಸರಕಾರ ಪ್ರತಿಯೊಂದು ಬಜೆಟದಲ್ಲಿ ದೇಶದ ಜನರ ಹಿತ ಕಾಪಾಡುವ ಬಜೆಟ್ ಆಗಲಿ ಎಂದು ಮಾತನಾಡಿದರು.ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸುರೇಶ ನಾಯಿಕ, ಸಿದರಾಯ ತೋಡಕರ, ಅಸ್ಲಾಂ ಮುಲ್ಲಾ, ಭೀಮಗೌಡ ನಾಯಿಕ, ಸಂತೋಷ ನಾಯಿಕ, ಗ್ರಾಮ ಪಂಚಾಯತ ಸದಸ್ಯರಾದ ಸಂಜಯ ಅದಾಟೆ,ಸಂತೋಷ ಕಲ್ಲೋತಿ,ಉಮೇಶ ಪಾಟೀಲ,ಅಶೋಕ ಬಾಡಗಿ, ಪಂಡಾರಿನಾಥ ಅಭ್ಯಂಕರ,ವಿನಾಯಕ ಕಲ್ಲೋತಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.