ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ – ಹಿರೇಮಠ ಕಾಲೇಜು ಜಯಭೇರಿ.
ಕೂಡ್ಲಿಗಿ ಸ.05





2025/26 ನೇ. ಸಾಲಿನ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಹಿರೇಮಠ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 15 ಬಹುಮಾನಗಳನ್ನು ಪಡೆದು ಕೊಂಡು ಜಯಭೇರಿ ಬಾರಿಸಿದ್ದಾರೆ. ವಿದ್ಯಾರ್ಥಿಗಳು ಒಟ್ಟು 9 ಪ್ರಶಸ್ತಿ ಪದಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಬಾಲಕರ ಪಂದ್ಯಾವಳಿಯಲ್ಲಿ ಕಬಡ್ಡಿ, ಹಾಕಿ, ಟೆನಿಕಾಯ್ಟ್, ಥ್ರೋ ಬಾಲ್ಗಳಲ್ಲಿ ಪ್ರಥಮ ಸ್ಥಾನ ಶಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ಪಂದ್ಯಾವಳಿಯಲ್ಲಿ ವಾಲಿಬಾಲ್, ಹಾಕಿ, ಟೆನಿಕಾಯ್ಟ್ ಗಳಲ್ಲಿ ಪ್ರಥಮ ಸ್ಥಾನ ಹಾಗೂ ಶಟಲ್ ಬ್ಯಾಡ್ಮಿಂಟನ್, ಚೆಸ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.

ಬಾಲಕರ ಉದ್ದ ಜಿಗಿತದಲ್ಲಿ ಕೆ.ದುರುಗಪ್ಪ ಪ್ರಥಮ ಸ್ಥಾನ, ಮೌನೇಶ್ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಎ.ಕೆ ಅಜೆಯ್ ದ್ವಿತೀಯ ಸ್ಥಾನ, ಬಾಲಕಿಯರ 200 ಮೀ.ಓಟದಲ್ಲಿ ಹಾಗೂ ಉದ್ದ ಜಿಗಿತದಲ್ಲಿ ಎಂ.ಬಿ ಪ್ರಾರ್ಥನ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಿರೇಮಠ ಸಂಸ್ಥೆಯ ಅಧ್ಯಕ್ಷರಾದ ಷ.ಬ್ರ ಪ್ರಶಾಂತ ಸಾಗರ ಶಿವಾಚಾರ್ಯ ಮಹಾ ಸ್ವಾಮಿಗಳು, ಕಾಲೇಜಿನ ಪ್ರಾಂಶುಪಾಲರಾದ ಸಿದ್ಧರಾಮ ಹಿರೇಮಠ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ