“ಬೆಳಕಿನ ಹಬ್ಬ ದೀಪಾವಳಿ”…..

ದೀಪಜ್ಯೋತಿಃ ಪರಬ್ರಹ್ಮ
ದೀಪಜ್ಯೋತಿರ್ಜನಾರ್ದನಃ
ದೀಪೋ ಹರತು ಮೇ ಪಾಪಂ
ದೀಪಜ್ಯೋತಿರ್ನಮೋಸ್ತುತೇ
ದೀಪಾವಳಿ ಹಬ್ಬದ ಶುಭಾಶಯಗಳು
ಮಣ್ಣಿನಿಂದ ಮಾಡಿದ ದೀಪಗಳಿಂದ
ಎಣ್ಣೆಯಲ್ಲಿ ಅದ್ದಿದ ಹತ್ತಿಯ ಬತ್ತಿಯಿಂದ
ಕತ್ತಲೆಯ ಮೇಲೆ ಬೆಳಕಿನ ವಿಜಯ ಸಂಕೇತದ
ಹಬ್ಬವನ್ನು ಆಚರಿಸೋಣ ದೀಪಗಳನ್ನು
ಬೆಳಗುವುದರಿಂದ
ಮಿನುಗುವ ದೀಪಗಳು, ಬೆರಗುಗೊಳಿಸುವ
ಪಟಾಕಿಗಳ ಹಬ್ಬ
ಕತ್ತಲೆಯ ಮೇಲೆ ಪ್ರೀತಿಯನ್ನು ಎತ್ತಿ
ಹಿಡಿಯುವ ಹಬ್ಬ
ಸುತ್ತಲಿನ ಎಲ್ಲರೊಂದಿಗೆ ಸಂತೋಷವನ್ನು
ಹಂಚಿಕೊಳ್ಳುವ ಹಬ್ಬ
ಎಲ್ಲರ ಮನೆ, ಮನದಲ್ಲೂ ಬೆಳಕನ್ನು
ಮೂಡಿಸುವ ಹಬ್ಬ
ದೀಪಗಳಂತೆ ನಮ್ಮ ಜೀವನವು ಸದಾ
ಬೆಳಗುತ್ತಿರಲಿ
ದೀಪಗಳ ಬೆಳಕಿನಲ್ಲಿ ಕತ್ತಲು ಕರಗುವಂತೆ
ಕಷ್ಟಗಳು ಕರಗಲಿ
ದೀಪದ ಹೊಳಪಿನಂತೆ ಜೀವನಪೂರ್ತಿ
ಸಂತೋಷ ತುಂಬಿರಲಿ
ಸಮೃದ್ಧಿ ಶಾಂತಿ ಆರೋಗ್ಯದ ಬೆಳಕನ್ನು
ಮೂಡಿಸಲಿ
ಜೀವಮಾನವಿಡೀ ಉಳಿಯುವ ಕ್ಷಣಗಳನ್ನು
ಸೃಷ್ಟಿಸೋಣ
ದೀಪದ ಬೆಳಕಿನಲ್ಲಿ ಪ್ರೀತಿಯ ದೀಪ
ಬೆಳಗಿಸೋಣ
ಸವಿನುಡಿಯ ತೈಲದ ಜೊತೆ ಬಾಳಿನ ಪ್ರಣತಿ
ಬೆಳಗೋಣ
ನಿಸ್ವಾರ್ಥದ ಜ್ಯೋತಿಯ ಬೆಳಕು
ಮೂಡಿಸೋಣ
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ

