“ಬೆಳಕಿನ ಹಬ್ಬ ದೀಪಾವಳಿ”…..

ಅಂಧಕಾರದಲಿ ದಿವ್ಯ ಚೇತನದ ಬೆಳಕು




ಬೆಳಗಿಸಿ
ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ
ಹೊತ್ತಿಸಿ
ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ
ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿ
ಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ
ಮೂಡಿಸಿ
ನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿ
ನಮ್ಮವರು ತಮ್ಮವರೆಂಬ ಸೌಜನ್ಯದ ಜ್ಯೋತಿ
ಸ್ಮರಿಸಿ
ದೀಪದಿಂದ ದೀಪವ ಹಚ್ಚಿ ದೀಪಾವಳಿಯ
ಸಂಭ್ರಮಿಸಿ
ಕತ್ತಲೆಯ ಮಧ್ಯದಲಿ ಭವಿಷ್ಯದ ದೀಪವ
ಕಾಣಿಸಿ
ಸೋಲುಗಳ ನಡುವೆ ಗೆಲುವಿನ ದೀಪವ
ಸ್ವೀಕರಿಸಿ
ದ್ವೇಷ ವೈಷಮ್ಯಗಳ ಆಕ್ರೋಶಗಳಲಿ
ಸ್ನೇಹದ ಜ್ಯೋತಿ ತೋರಿಸಿ
ಪಟಾಕಿಗಳ ಹಬ್ಬ ದೀಪಾವಳಿಯ ಪ್ರೀತಿಯಿಂದ
ಸ್ವಾಗತಿಸಿ
ಅನ್ಯಾಯ ಅಕ್ರಮಗಳಲಿ ನ್ಯಾಯ ನೀತಿಯ
ದೀಪ ಬೆಳಗಿಸಿ
ಅಧರ್ಮದ ಹಾದಿ ಬಿಟ್ಟು ಧರ್ಮದ ದೀಪ
ಪೂಜಿಸಿ
ನಾನು ಎಂಬ ಅಹಂಕಾರದ ಮಧ್ಯೆ ನಾವು
ಎಂಬ ಭಾವ ಇರಿಸಿ
ಈ ದಿನ ಈ ಕ್ಷಣ ನಲಿವಿನ ದೀಪಾವಳಿಯ
ಆಚರಿಸಿ
ನಿಸ್ವಾರ್ಥದ ಹಣತೆಯಲಿ, ನಂಬಿಕೆ ಎಂಬ
ಬತ್ತಿಗೆ, ಮಾನವೀಯತೆಯ ಎಣ್ಣೆ ಹಾಕಿ,
ಕಲ್ಮಶವಿಲ್ಲದ ಬೆಂಕಿಯೊಂದಿಗೆ ಆತ್ಮವಿಶ್ವಾಸದ
ಜ್ಯೋತಿಯ ಬೆಳಗಿಸೋಣ, ದೀಪಾವಳಿಯ
ಸಂಭ್ರಮಿಸೋಣ
ಸರ್ವರಿಗೂ ದೀಪಾವಳಿ ಹಬ್ಬದ ಪ್ರೀತಿಯ
ಶುಭಾಶಯಗಳು…..

ಶ್ರೀ ಮುತ್ತು.ಯ.ವಡ್ಡರ
(ಶಿಕ್ಷಕರು, ಹಿರೇಮಾಗಿ)
ಬಾಗಲಕೋಟ
Mob-9845568484