ಮನಸ್ಸಿನ ಸಮತೋಲನ ಕಾಪಾಡಿ ಕೊಳ್ಳಿ, ಸಂತೋಷದಿಂದ ಬದುಕಿ – ನ್ಯಾಯಾಧೀಶರ ಸಂದೇಶ.

ಮಾನ್ವಿ ಅ.20

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ರಾಯಚೂರು) ಜಿಲ್ಲಾ ಆರೋಗ್ಯ ಸಂಘ (ಮಾನಸಿಕ ಆರೋಗ್ಯ ವಿಭಾಗ) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತೀಯ ಮನೋ ವೈದ್ಯಕೀಯ ಸಂಘ (ಕರ್ನಾಟಕ ಶಾಖೆ) ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಕ್ಷಕ/ಕಾರಾಗೃಹ ಇಲಾಖೆ, ಅಬಕಾರಿ ಇಲಾಖೆ, ಮನೋ ರೋಗ ವಿಭಾಗ ರಿಮ್ಸ್ ರಾಯಚೂರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶಿವರಾಜ ವಿ. ಸಿದ್ದೇಶ್ವರ ನೆರವೇರಿಸಿ ಮಾತನಾಡಿ — “Sound mind is a sound body”, ಅಂದರೆ ದೇಹ ಆರೋಗ್ಯವಾಗಿರಲು ಮನಸ್ಸು ಆರೋಗ್ಯವಾಗಿರ ಬೇಕು ಎಂದು ಹೇಳಿದರು.

ಮಾನಸಿಕ ಆರೈಕೆ ಜೀವನದ ಅತ್ಯಂತ ಮುಖ್ಯ ಭಾಗವಾಗಿದೆ. ಸಿಟ್ಟು, ಕೋಪ, ಆತಂಕ, ಸರಿಯಾದ ಸಮಯಕ್ಕೆ ನಿದ್ದೆ ಮತ್ತು ಊಟದ ಕೊರತೆ ಇವು ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತವೆ. ಪ್ರತಿದಿನ ಧ್ಯಾನ, ವ್ಯಾಯಾಮ, ಸಂಭಾಷಣೆ ಮತ್ತು ಹಿತಕರ ಚಿಂತನೆಗಳ ಮೂಲಕ ಮನಸ್ಸಿನ ಸಮತೋಲನ ಕಾಪಾಡಿ ಕೊಳ್ಳುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ತಜ್ಞ ಮನೋಹರ ಪತ್ತಾರ ಅವರು ವಿಶ್ವ ಮಾನಸಿಕ ಆರೋಗ್ಯ ದಿನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಅವರು ಮಾನಸಿಕ ಅಸ್ವಸ್ಥತೆಗಳನ್ನು ಗುರುತಿಸುವುದು, ಅದನ್ನು ನಿರ್ಲಕ್ಷಿಸದೆ ಸಲಹೆಗಾರರ ನೆರವನ್ನು ಪಡೆಯುವುದು ಹಾಗೂ ಕುಟುಂಬದ ಬೆಂಬಲದ ಅಗತ್ಯತೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಡಾ, ಶರಣಬಸವ ವಹಿಸಿದ್ದರು.ಹಿರಿಯ ನ್ಯಾಯವಾದಿಗಳಾದ ಗುಮ್ಮ ಬಸವರಾಜ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಆನಂದ.ಹೆಚ್ ಕೊಣ್ಣೂರು, ನ್ಯಾಯವಾದಿಗಳ ಸಂಘ ಅಧ್ಯಕ್ಷ ರವಿಕುಮಾರ ಪಾಟೀಲ್, ಖಜಾಂಚಿ ದತ್ತಾತ್ರೇಯ ಹಿರೇಕೊಟ್ಟೆಕಲ್, ಜಂಟಿ ಕಾರ್ಯದರ್ಶಿ ಮಲ್ಲೇಶ ಮಾಚನೂರು, ಕರ್ನಾಟಕ ರಾಜ್ಯ ವಿಕಲ ಚೇತನರ ರಾಜ್ಯ ಸಂಘಟನಾ ಕಾರ್ಯದರ್ಶಿ ‌ದೇಸಾಯಿ ದೋತರಬಂಡಿ, ಸಂಕಲ್ಪ ವಿಕಲ ಚೇತನರ ಸಂಘ ಅಧ್ಯಕ್ಷ ಶಿವಕುಮಾರ್ ಚಲ್ಮಲ್ ಸೇರಿದಂತೆ ವಿದ್ಯಾರ್ಥಿಗಳು, ವೈದ್ಯಾಧಿಕಾರಿಗಳು, ನರ್ಸಿಂಗ್ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button