ಕ್ಷಮೆ, ಸಹನಾಮೂರ್ತಿ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ಅಭಿಪ್ರಾಯ.
ಚಳ್ಳಕೆರೆ ಅ.20





ಕ್ಷಮೆ, ಸಹನಾ ಮೂರ್ತಿ ಶ್ರೀಮಾತೆ ಶಾರದಾದೇವಿಯವರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ ಪಟ್ಟರು.
ಶಾಂತಿ ನಗರದ ಸದ್ಭಕ್ತರಾದ ಶ್ರೀಮತಿ ಮೋಹಿನಿ ಸತ್ಯನಾರಾಯಣ ಅವರ ನಿವೇದಿತಾ ನಿವಾಸದಲ್ಲಿ ದಾಮೋದರ ಮಾಸದ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಶ್ರೀಮಾತೆ ಶಾರದಾದೇವಿಯವರ ಕ್ಷಮೆ ಮತ್ತು ಸಹನೆ” ಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶಾಂತಿ ನಗರದ ಶ್ರೀಮತಿ ಸುನೀತಾ ಗೋಪಾಲಕೃಷ್ಣ ಮತ್ತು ಮಾಕಂಸ್ ಲಕ್ಷ್ಮೀ ಬಾಲಾಜೀ ಅವರ ನೇತೃತ್ವದಲ್ಲಿ ಶ್ರೀಗಣಪತಿ ಭಜನಾ ಮಂಡಳಿಯಿಂದ ವಿಶೇಷ ಭಜನೆ, ಗೀತಾ ಪ್ರಕಾಶ್ ಅವರಿಂದ ಭಾವಗೀತೆ ಗಾಯನ, ಶ್ರೀಕೃಷ್ಣನ ನಾಮಸ್ಮರಣೆ, ದಾಮೋದರ ಮಾಸದ ಬಗ್ಗೆ ಶ್ರೀಮತಿ ಪರಿಮಳಾ ಅವರಿಂದ ವಿಶೇಷ ಮಾಹಿತಿ, ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನ ಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.
ಸತ್ಸಂಗದ ಕೊನೆಯಲ್ಲಿ ಎಲ್ಲಾ ಸದ್ಭಕ್ತರಿಂದ ದಾಮೋದರ ಮಾಸದ ಪ್ರಯುಕ್ತ ಶ್ರೀಕೃಷ್ಣನಿಗೆ ದಾಮೋದರ ಅಷ್ಟಕ, ನರಸಿಂಹ ಸ್ತೋತ್ರ ಪಠಣದೊಂದಿಗೆ ತುಪ್ಪ ಹಚ್ಚಿದ ತುಳಸೀ ಕಡ್ಡಿಯಿಂದ ಆರತಿ ಹಾಗೂ ಅನ್ನಪ್ರಸಾದ ವಿನಿಯೋಗ ನಡೆಯಿತು.

ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮೋಹಿನಿ ಸತ್ಯನಾರಾಯಣ, ನಿವೇದಿತಾ, ಗುಣಿತ್ ರಾಮ್, ಪುಷ್ಪ, ಮೀನಾ, ವೈಷ್ಣವಿ, ತಿಪ್ಪಮ್ಮ, ಜಯಮ್ಮ, ಗೀತಾ ಸುಂದರೇಶ್ ದೀಕ್ಷಿತ್, ಜ್ಯೋತಿ, ಈಶ್ವರಮ್ಮ, ಲತಾ, ಪವಿತ್ರ, ಮಾರುತಿ, ಆಶಾ, ಕಾಮಾಕ್ಷಿ, ಸುಮಾ, ಲಕ್ಷ್ಮೀದೇವಮ್ಮ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.