ಪೌರ ಕಾರ್ಮಿಕ ಅನಾಥ ಹುಡುಗನಿಗೆ ಕೆಲಸ ಕೊಡಿಸಿದ – ಶಾಸಕ ಜಿ.ಟಿ ದೇವೇಗೌಡರು.
ಮೈಸೂರು ಅ.20





ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಶ್ರೀರಾಂಪುರ ವಾಸಿಯಾದ ಪರಿಶಿಷ್ಟ ಪೌರ ಕಾರ್ಮಿಕ ಅನಾಥ ಹುಡುಗ ಕುಮಾರಸ್ವಾಮಿಗೆ (21 ವರ್ಷ) ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ಶಾಸಕ ಜಿ.ಟಿ ದೇವೇಗೌಡರು ಕೆಲಸವನ್ನು ಕೊಡಿಸಿ ಅನಾಥನ ಬಾಳಿಗೆ ಬೆಳಕಾದರು.
ದಿನಾಂಕ-19-10-2025 ರ ಭಾನುವಾ ರಂದು ಮೈಸೂರು ಜಿಲ್ಲಾ ಡಿ.ಎಸ್.ಎಸ್ ದ ನಿಂಗರಾಜ್ ಮಲ್ಲಾಡಿ, ಕೆ.ನಂಜಪ್ಪ ಬಸವನಗುಡಿ, ಅಲೆಮಾರಿ ಸಂಘದ ವೈ.ಕುಮಾರ ಏಕಲವ್ಯ ನಗರ ಮುಂತಾದವರು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ ರವರ ನಿವಾಸದಲ್ಲಿ ಭೇಟಿಯಾದ ಸಂದರ್ಭದಲ್ಲಿ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಶ್ರೀರಾಂಪುರದ ಪರಿಶಿಷ್ಟ ಪೌರ ಕಾರ್ಮಿಕ ಕುಮಾರಸ್ವಾಮಿ ಎಂಬ ಹುಡುಗ ತನ್ನ ತಂದೆ ತಾಯಿಯನ್ನು ಸ್ವಲ್ಪ ದಿನದ ಹಿಂದೆ ಕಳೆದು ಕೊಂಡು ಅನಾಥವಾಗಿ ಕೆಲಸವೂ ಇಲ್ಲದೆ ತುಂಬಾ ಸಂಕಷ್ಟದಲ್ಲಿ ಅನಾಥ ಪ್ರಜ್ಞೆಯಿಂದ ಬಳಲುತ್ತಾ ತುಂಬಾ ನೋವಿನಲ್ಲಿ ಕುಮಾರಸ್ವಾಮಿಗೆ ಇದ್ದು, ಈತನಿಗೆ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ನೇಮಕ ಮಾಡಿಸಿ ಕೊಟ್ಟು ಈತನ ಸಂಕಷ್ಟದ ಜೀವನಕ್ಕೆ ನೆರವಾಗಬೇಕೆಂದು ಮನವಿ ಮಾಡಿದರು.
ಕೂಡಲೇ ಶಾಸಕರಾದ ಜಿ.ಟಿ ದೇವೇಗೌಡ ರವರು ಶ್ರೀರಾಂಪುರ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಸುರೇಶ್ ರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕುಮಾರಸ್ವಾಮಿ ಎಂಬ ಪೌರ ಕಾರ್ಮಿಕ ಹುಡುಗನಿಗೆ ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ನೇಮಕ ಮಾಡಿ ಕೊಳ್ಳುವಂತೆ ತಿಳಿಸಿದರು. ಜಿ.ಟಿ ದೇವೇಗೌಡರ ಸೂಚನೆಗೆ ಮುಖ್ಯಾಧಿಕಾರಿ ಸುರೇಶ್ ರವರು ಸ್ಪಂದಿಸಿ ಕುಮಾರಸ್ವಾಮಿ ಎಂಬ ಹುಡುಗನನ್ನು ಕಳುಹಿಸಿ ಕೊಡಿ ಸರ್. ನಾನು ಕೆಲಸಕ್ಕೆ ನೇಮಿಸಿ ಕೊಳ್ಳುತ್ತೇನೆಂದು ತಿಳಿಸಿದರು. ಜಿ.ಟಿ ದೇವೇಗೌಡ ರವರು ಹುಣಸೂರು ಶಾಸಕ ರಾದಾಗಲಿಂದಲೂ ಇಂದಿನ ವರೆಗೂ ದಲಿತರು, ಪೌರ ಕಾರ್ಮಿಕರು, ನಿರ್ಗತಿಕ ಅಲೆಮಾರಿ ಸಮುದಾಯಗಳು, ದಿಕ್ಕು ದನಿಯಿಲ್ಲದ ಅನಾಥ ಸಮುದಾಯಗಳ ಬಗ್ಗೆ ಅಪಾರವಾದ ಪ್ರೀತಿ, ಕರುಣೆ, ಸಹಾನುಭೂತಿಯನ್ನು ಹೊಂದಿರುವ ನಾಯಕರಾಗಿದ್ದಾರೆ. ದಲಿತರನ್ನು ಬರಿ ಕಣ್ಣಿನಿಂದ ನೋಡದೇ ಹೃದಯಾಂತರಾಳ ದಿಂದ ನೋಡಿ ಅವರ ನೋವು ದುಃಖ ದುಮ್ಮಾನಗಳಿಗೆ ಸ್ಪಂದಿಸುವ ನಾಯಕರಾಗಿದ್ದಾರೆ. ಇಂತಹ ನಾಯಕರು ರಾಜಕಾರಣದಲ್ಲಿ ಮತ್ತು ಸಮಾಜದಲ್ಲಿ ಅಪರೂಪದಲ್ಲಿ ಅಪರೂಪ ಎಂದೇ ಹೇಳಬಹುದು. ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ ಪೌರ ಕಾರ್ಮಿಕ ಕುಮಾರಸ್ವಾಮಿ ಎಂಬ ಹುಡುಗನ ನೋವನ್ನು ತಿಳಿದು ಕೊಂಡು ಶ್ರೀರಾಂಪುರ ಪಟ್ಟಣ ಪಂಚಾಯ್ತಿಯಲ್ಲಿ ಕೆಲಸ ಕೊಡಿಸಿ ಆತನ ಬಾಳಿಗೆ ಬೆಳಕು ನೀಡಿದ್ದಾರೆ. ಜಿ.ಟಿ ದೇವೇಗೌಡರಿಗೆ ಮೈಸೂರು ಜಿಲ್ಲಾ ಡಿ.ಎಸ್.ಎಸ್ ಪೌರ ಕಾರ್ಮಿಕ ಸಂಘ, ಅಲೆಮಾರಿ ಸಂಘ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿಯ ಸದಸ್ಯರಾದ ಕೆ.ನಂಜಪ್ಪ ಬಸವನಗುಡಿ, ಅಲೆಮಾರಿ ಸಂಘದ ಅಧ್ಯಕ್ಷರಾದ ವೈ ಕುಮಾರ, ಉದ್ಯೋಗದ ಫಲಾನುಭವಿಯಾದ ಕುಮಾರಸ್ವಾಮಿ ಹಾಜರಿದ್ದರು.
ನೋವು ಮತ್ತು ಆತಂಕದ ಛಾಯೆ ಹೊಂದಿದ್ದ ಪೌರ ಕಾರ್ಮಿಕ ಕುಮಾರಸ್ವಾಮಿಯ ಮುಖದಲ್ಲಿ ಜಿ.ಟಿ ದೇವೇಗೌಡರ ಸಹಕಾರ ದಿಂದ ಆತ್ಮಬಲ ಬಂದು ಮುಖದಲ್ಲಿ ಮಂದಹಾಸ ಬೀರುತ್ತಿತ್ತು ಎಂದು ವರದಿಯಾಗಿದೆ.