“ಹೃದಯ ಗೆಲ್ಲುವ ದೀಪಗಳ ದಿಬ್ಬಣ”…..

ದೀಪಗಳ ಹಬ್ಬ ಸರ್ವರ ಹೃದಯ




ಗೆಲ್ಲುವ ದಿಬ್ಬಣವು
ದೀಪದಿಂದ ದೀಪ ಜಗವ ಬೆಳಗುವ
ಜ್ಯೋತಿಗಳು
ಅಂದಕಾರ ಅಹಂಕಾರ ಕಳೆವ
ಜ್ಞಾನ ಬೆಳಕು
ಅರಿವಿನ ಜ್ಯೋತಿಯ ಕಿರಣದಿ
ದುಷ್ಟತನವ ನಾಶವು
ಒಳ್ಳೆಯತನವ ಬಿತ್ತಿ ಬೆಳೆವ ಚಿಜ್ಯೋತಿ
ದಿನಕರನ ಹೊನ್ನಕಿರಣಗಳು
ದುಷ್ಟ ಕೂಟವ ಚದುರಿಸಿ ಬೆಳಕ ಬಿತ್ತುವ
ಸಮೃದ್ಧಿ ಸಿರಿಯ
ಪಟ ಪಟ ಪಟಾಕಿ ತನು ಮನಗಳ
ಪುಳಿಕಿತ ಆನಂದೋತ್ಸಾಹವು
ಮನ ಮನೆಗಳಲ್ಲಿ ಸಂಭ್ರಮ ಬೆಳಕು
ವರುಷ ವರುಷ ಹರುಷವು
ದೀಪಗಳ ಹಬ್ಬ ಸರ್ವರ ಹೃದಯ
ಗೆಲ್ಲುವ ದೀಪಗಳ ದಿಬ್ಬಣವು

ಶ್ರೀ ದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ