ಚನ್ನಮ್ಮ ಕಿತ್ತೂರು ಉತ್ಸವ 2025 ಕ್ಕೆ ಸುಗಮ ಸಂಗೀತ ಕಾರ್ಯಕ್ರಮಕ್ಕೆ – ತಿಮ್ಮನಹಳ್ಳಿ ಶ್ರೀ ಡಿ.ಬಿ ನಿಂಗರಾಜು ರವರು ಆಯ್ಕೆ.
ಕೂಡ್ಲಿಗಿ ಅ.21





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ತಿಮ್ಮನಹಳ್ಳಿ ಗ್ರಾಮದ ಯುವ ಗಾಯಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಿ.ಬಿ ನಿಂಗಪ್ಪ ಅವರಿಗೆ ಈ ಬಾರಿ ಬೆಳಗಾವಿ ಜಿಲ್ಲೆಯ ಕಿತ್ತೂರುನಲ್ಲಿ ನಡೆಯುವ ರಾಣಿ ಚೆನ್ನಮ್ಮ ಉತ್ಸವದ ಕಿತ್ತೂರು ರಾಣಿ ಚೆನ್ನಮ್ಮ ಕೋಟೆ ಆವರಣದ ಮುಖ್ಯ ವೇದಿಕೆಯಲ್ಲಿ ಸುಗಮ ಸಂಗೀತ ಪ್ರಸ್ತುತಿಗೆ ಒಲಿದು ಬಂದ ಅವಕಾಶ ನಮ್ಮ ವಿಜಯನಗರ ಜಿಲ್ಲೆಯ ಯುವ ಪ್ರತಿಭೆ ನಮ್ಮ ಹೆಮ್ಮೆ ಕೂಡ್ಲಿಗಿ ತಾಲೂಕಿನ ತಿಮ್ಮನಹಳ್ಳಿ ಸರ್ವ ಸದಸ್ಯರೆಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಇವರ ಕುಟುಂಬ ಕಲಾವಿದರ ಕುಟುಂಬವಾಗಿದೆ. ಮೊದಲಿಗೆ ಪಾಲಜ್ಜನವರ ವಂಶದ ಕುಡಿ ತಂದೆ ಹಿರೇಹಳ್ಳಿ ದುರುಗಪ್ಪ ಇವರ ಕೋಲಾಟ ನಾಟಕ ಕಲಾವಿದರು. ಹಾಗೂ ತಾಯಿ ಬಸಮ್ಮ ಅಕ್ಕ ಚನ್ನಮ್ಮನವರ ಸೋಬಾನೆ ಪದ, ನಂತರ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಚಿನ್ನೊಬನಹಳ್ಳಿ ಗ್ರಾಮದ ರಂಗ ಭೂಮಿಯ ಗಾನ ಕೋಗಿಲೆ, ದ್ವಿಕಂಠ ವಾಹಿನಿ, ಡಿ.ಒ ಮುರಾರ್ಜಿ ಅವರ ಗರಡಿಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದು, ಸಪ್ತ ಸ್ವರಗಳನ್ನು ಉಜ್ಜಯಿನಿಯ ವಾಗೀಶ್ ಗವಾಯಿಗಳಿಂದ, ಸಿದ್ದಯ್ಯನಕೋಟೆ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ವಿದ್ವತ್ ಪದವಿ ಪಡೆದು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಸಂಗೀತ ಪದವಿ ಪಡೆದಿದ್ದಾರೆ.
ಗಾಯಕ ಡಿ.ಬಿ ನಿಂಗಪ್ಪ ಅವರು ಗಾಯನ, ಸಂಗೀತ, ವಚನ ಗಾಯನ, ದಾಸವಾಣಿ, ಜಾನಪದ ಸಂಗೀತದ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ಈ ಬಾರಿ ರಾಣಿ ಚೆನ್ನಮ್ಮ ಕಿತ್ತೂರು ಉತ್ಸವದಲ್ಲಿ ಇದೇ ಅಕ್ಟೋಬರ್ 23-10-2025 ಗುರುವಾರ ರಂದು ರಾಣಿ ಚೆನ್ನಮ್ಮ ಕೋಟೆ ಆವರಣದ ಮುಖ್ಯ ವೇದಿಕೆಯ ಮೂಲಕ ಸುಗಮ ಸಂಗೀತಕ್ಕೆ ಧ್ವನಿ ಯಾಗಲಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ