ಅ.29 ರಿಂದ ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು – ಶ್ರೀ ನೀರಂಜನ ದೇವರು.

ಕರೆಗುಡ್ಡ ಅ.21

ಮಾನ್ವಿ ತಾಲೂಕಿನ ಮಾನ್ವಿ ಪಟ್ಟಣದ ಶ್ರೀ ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಪ್ರಸಾದ ನಿಲಯದ ಸಭಾಂಗಣದಲ್ಲಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿನ ಶ್ರೀ ಮಹಾಂತೇಶ್ವರ ಮಠದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಕುರಿತು ನಡೆದ ಶ್ರೀ ಮಠದ ಭಕ್ತರ ಪೂರ್ ಭಾವಿ ಸಭೆಯಲ್ಲಿ ಮೈಸೂರಿನ ನೀರಂಜನದೇವರು ಮಾತನಾಡಿ ತಾಲೂಕಿನ ಕರೆಗುಡ್ಡ ಶ್ರೀ ಮಹಾಂತೇತ್ವರ ಮಠವು ಶ್ರೀ ಮಹಾಂತೇಶ್ವರ ಸ್ವಾಮಿಗಳ ತಪೋ ಭೂಮಿಯಾಗಿದ್ದು ರ್ಶರೀ ಮಠದಲ್ಲಿ ಶ್ರೀ ಅಂಬಮಠದ ಶ್ರೀ ಅಂಬದೇವಿಯು ನೆಲೆಸಿದ ಪುಣ್ಯಮಯ ಜಾಗೃತ ಕ್ಷೇತ್ರವಾಗಿದ್ದು ಶ್ರೀಮಠದ ಪ್ರಸ್ತುತ ಶ್ರೀಗಳಾದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವದ ರಜತಮಹೋತ್ಸವ ಕಾರ್ಯಕ್ರಮವನ್ನು ಶ್ರೀ ಮಠದ ಭಕ್ತರು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದ್ದು. ಅ.29 ರಿಂದ ನ.6 ರವರಿಗೆ ಪ್ರತಿದಿನ ಸಂಜೆ 6-30 ರಿಂದ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ನ.1 ರಂದು ಬೆಳಿಗ್ಗೆ 9 ರಿಂದ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗರು ಶ್ರೀ ವೀರ ಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ, ವೀರ ಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಸಭೆ ಕಾರ್ಯಕ್ರಮ ನಡೆಯಲಿದೆ.

ನ.7 ರಂದು ಬೆಳಿಗ್ಗೆ 9 ರಿಂದ ಶ್ರೀಮಠದ ನೂತನ ಗೋಪುರಗಳ ಲೋಕಾರ್ಪಣೆ ಮತ್ತು ಐದು ಸಾವಿರದ ಒಂದು ಸುಮಂಗಲಿಯರಿಂದ ಉಡಿ ತುಂಬುವ ಕಾರ್ಯಕ್ರಮ, ಸಂಗೀತ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೀಪೋತ್ಸವ ನ.8 ರಂದು ಜಂಗಮ ವಟುಗಳಿಗೆ ಅಯ್ಯಾಚಾರ, ರಥಕ್ಕೆ ಕಳಸಾ ರೋಹಣ ಸಂಜೆ 5 ಕ್ಕೆ ಗಜಲಕ್ಷ್ಮಿಯ ಮೇಲೆ ಅಂಬಾರಿ ಮೆರವಣಿಗೆ ರಥೋತ್ಸವ ಶ್ರೀಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳಿಗೆ ಗುರು ವಂದನೆ ಹಾಗೂ ಬೆಳ್ಳಿಯಿಂದ ತುಲಾಭಾರ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಶ್ರೀ ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.

ದರೂರು ಮಠದ ಶ್ರೀ ಕೊಟ್ಟೂರು ಸ್ವಾಮಿಗಳು, ಹೊಸಪೇಟೆಯ ಶ್ರೀ ಚಂದ್ರಶೇಖರ ಗುರುಗಳು, ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಕಿರಿಯ ಶ್ರೀಗಳಾದ ಸಂಗನ ಬಸವ ದೇವರು, ತಾ.ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹಾರ ಪಾಟೀಲ್, ಮುಖಂಡರಾದ ತಿಮ್ಮರೆಡ್ಡಿ ಭೋಗವಾತಿ, ಮಲ್ಲನಗೌಡ ನಕ್ಕುಂದಿ, ಶಿವಯ್ಯಸ್ವಾಮಿ, ಗಣೇಕಲ್ ಮಲ್ಲನಗೌಡ, ಶರಣೆಗೌಡ ನಕ್ಕುಂದಿ, ಮೌನೇಶಗೌಡ.ಹೆಚ್ ಶಿವಯ್ಯಸ್ವಾಮಿ ಗವಿಗಟ್, ಸಿದ್ದರಾಮಯ್ಯಸ್ವಾಮಿ, ಚಂದ್ರಶೇಖರ ಕೋಟ್ನೆಕಲ್, ಮಹಾಂತೇಶ್ ಗವಿಗಟ್, ರಾಜಶೇಖರಯ್ಯಸ್ವಾಮಿ, ಶ್ರೀಕಾಂಗೂಳಿ, ಸುರೇಶ ನಾಡಗೌಡ, ಅಮರೇಶ ಗವಾಯಿ, ಸೇರಿದಂತೆ ಇನ್ನಿತರರು ಇದ್ದರು.

ಬಾಕ್ಸ್ ನ್ಯೂಸ್:-

ಪಟ್ಟಣದ ಶ್ರೀ ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಪ್ರಸಾದ ನಿಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕರೆಗುಡ್ಡ ಶ್ರೀ ಮಠದ ಕಾರ್ಯಕ್ರಮಗಳ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button