ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಪೋತ್ನಾಳ್ ವತಿಯಿಂದ – ಹೆಣ್ಣು ಮಕ್ಕಳ ದಿನಾಚರಣೆ.
ಪೋತ್ನಾಳ ಅ.21





ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಪೋತ್ನಾಳ್ ವಿಮುಕ್ತಿ ಸಭಾಂಗಣದಲ್ಲಿ ನಡೆದ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಪೋತ್ನಾಳ್ ನಿರ್ದೇಶಕರಾದ ಫಾ. ಸತೀಶ್ ಫೆರ್ನಾಂಡಿಸ್ ಮಾತನಾಡಿ ಪಾಲಕರು ಹೆಣ್ಣು ಮಕ್ಕಳ ಬಗ್ಗೆ ಇರುವ ಹಲವು ಮೌಡ್ಯ ವಿಚಾರಗಳನ್ನು ಬಿಟ್ಟು ಶಿಕ್ಷಣವನ್ನು ನೀಡುವುದಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಬೇಕು ಹೆಣ್ಣು ಮಕ್ಕಳು ಕೂಡ ತಮ್ಮ ಮನೆಯಲ್ಲಿನ ಸೀಮಿತವಾದ ವಾತಾವರಣದಿಂದ ಹೊರಬಂದು ಸ್ವತಂತ್ರ ಆಲೋಚನಾ ಶಕ್ತಿಯನ್ನು ಬೆಳೆಸಿಕೊಂಡು ತಮ್ಮ ಹಕ್ಕುಗಳನ್ನು ಪಡೆದು ಕೊಳ್ಳುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಕರ್ನಾಟಕ ಕಪುಚಿನ್ ಪ್ರಾಂತ್ಯದ ಪ್ರಾಂತಿಯ ಅಧಿಕಾರಿ ಫಾ.ರಾಬಿನ್‌ವಿಕ್ಟರ್‌ಡಿಸೋಜ ಮಾತನಾಡಿ ನಮ್ಮ ದೇಶದಲ್ಲಿ ಸಂವಿಧಾನ ಜಾರಿಯಾದ ನಂತರ ಹೆಣ್ಣುಮಕ್ಕಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯುವುದಕ್ಕೆ ಸಾಧ್ಯವಾಗಿದೆ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯುವುದಕ್ಕೆ ಮುಂದಾಗ ಬೇಕು ಎಂದು ತಿಳಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳ ಹಕ್ಕುಗಳ ಕುರಿತಾಗಿ ಘೋಷಣೆಗಳನ್ನು ಕೂಗುತ್ತ ಜಾಗೃತಿ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಪುಚಿನ್ ಪ್ರಾಂತ್ಯದ ಖಜಾಂಚಿಗಳಾದ ಫಾ, ವಿಜೇಶ್ ಮಿನೇಜಸ್, ಹೆಣ್ಣು ಮಕ್ಕಳ ಪ್ರತಿ ನಿಧಿಗಳಾಗಿ ಕು, ಅನಿತಾ ಮರಕಂದಿನ್ನಿ. ಕು, ರೇಷ್ಮಾ ದೇವಿಪುರ. ವಿಮುಕ್ತಿ ಸಂಸ್ಥೆಯ ತಾ. ಸಂಯೋಜಕರಾದ ಜಯಶೀಲ ದೋತರಬಂಡಿ, ಸಂಸ್ಥೆಯ ಸಿಬ್ಬಂದಿಗಳಾದ ಚಾರ್ಲಿ ಉದ್ಬಾಳ, ಕು, ಮಮತ, ಈಶಮ್ಮ ಸುಂಕನೂರು, ಲೂರ್ದಮೇರಿ ಮುದ್ದನಗುಡಿ, ಸಿದ್ದಲಿಂಗಮ್ಮ ಉಟಕನೂರು, ಭಾಗ್ಯಮ್ಮ ಪೋತ್ನಾಳ, ಸುಂಕಲಮ್ಮ ದೇವಿಪುರ, ದೇವರಾಯಪ್ಪ ದೋತರಬಂಡಿ, ಜೆಸಿಂತಾ ಮುದ್ದನಗುಡ್ಡಿ, ಆರೋಗ್ಯಪ್ಪ ದುಮತಿ ಪ್ರಿಯಾ ಜವಳಗೇರಾ ಸೇರಿದಂತೆ ಇನ್ನಿತರರು ಇದ್ದರು.
ಬಾಕ್ಸ್ ನ್ಯೂಸ್:-
ತಾಲೂಕಿನ ಪೋತ್ನಾಳ್ ಗ್ರಾಮದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಪೋತ್ನಾಳ್ ವಿಮುಕ್ತಿ ಸಭಾಂಗಣದಲ್ಲಿ ನಡೆದ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಪೋತ್ನಾಳ್ ನಿರ್ದೇಶಕರಾದ ಫಾ, ಸತೀಶ್ ಫೆರ್ನಾಂಡಿಸ್ ಮಾತನಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ