ಸಿಡಿಲು ಬಡಿದು ಮೂರು – ಮೇಕೆಗಳು ಸಾವು.
ಜುಮ್ಮೋಬನಹಳ್ಳಿ ಅ.22





ಕಾನ ಹೊಸಹಳ್ಳಿ ಸಮೀಪದ ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 3:30 ಕ್ಕೆ ಗುಡುಗು ಮಿಂಚು ಮಿಶ್ರಿತ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ 3 ಮೇಕೆಗಳು ಬಲಿಯಾದ ಘಟನೆ ಜರುಗಿದೆ. ಗ್ರಾಮದ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಮೇಯಲು ಹೋಗಿದ್ದಾಗ ಗುಡುಗು, ಮಿಂಚು, ಮಿಶ್ರಿತ ಮಳೆಯಾಗಿದ್ದು, ಮೇಕೆಗಳು ಗಿಡಗಳ ಕೆಳಗಡೆ ನಿಂತಿದರಿಂದ ಸಿಡಿಲು ಬಡಿದ ಪರಿಣಾಮ ಸಣ್ಣ ಬೋರಯ್ಯ, ಎರ್ರಿ ತಮ್ಮಯ್ಯ ಹಾಗೂ ತಿಪ್ಪೇಸ್ವಾಮಿ ಇವರ ಮೂವರಿಗೆ ಸೇರಿದ ಮೂರು ಮೇಕೆಗಳು ಸಿಡಿಲಿನ ಬಡಿತಕ್ಕೆ ಮೃತ ಪಟ್ಟಿವೆ. ಅಂದಾಜು 45,000 ಅಧಿಕ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಕುರಿಗಾಯಿಗರಿಗೆ ಸೂಕ್ತ ಪರಿಹಾರವನ್ನು ತಾಲೂಕು ಆಡಳಿತ ಕಲ್ಪಿಸಬೇಕೆಂದು ಇಲ್ಲಿನ ಮುಖಂಡರು ರೈತರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ಚನ್ನಬಸಯ್ಯ ಹಾಗೂ ಡಾ, ಸುನಿಲ್ ಪಶು ವೈದ್ಯಧಿಕಾರಿ ತಾಯಕನಹಳ್ಳಿ, ಹೊಸಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ