ಮಕ್ಕಳು ಬೇಗ ಮಲಗಿ ಬೇಗ ಏಳುವ ಅಭ್ಯಾಸವನ್ನು ರೂಢಿಸಿ ಕೊಳ್ಳಬೇಕು – ಯತೀಶ್.ಎಂ ಸಿದ್ದಾಪುರ ಸಲಹೆ.
ಚಳ್ಳಕೆರೆ ಅ.22




ಮಕ್ಕಳು ಪ್ರತಿ ನಿತ್ಯ ಬೇಗ ಮಲಗಿ ಬೇಗ ಏಳುವ ಅಭ್ಯಾಸವನ್ನು ರೂಢಿಸಿ ಕೊಳ್ಳುವುದರಿಂದ ದಿನಚರಿ ಚೆನ್ನಾಗಿ ನಡೆಯುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಲೇಖಕ ಯತೀಶ್.ಎಂ ಸಿದ್ದಾಪುರ ಅವರು ಮಕ್ಕಳಿಗೆ ಸಲಹೆ ನೀಡಿದರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನೆಯನ್ನು ನಡೆಸಿಕೊಟ್ಟ ಅವರು “ಹೊತ್ತಿಗೆ ಮುಂಚೆ ಏಳುವುದು” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ , ಸ್ವದೇಶ ಮಂತ್ರದ ಪಠಣ ನಡೆಯಿತು.
ಈ ಸಂದರ್ಭದಲ್ಲಿ ಕುಮಾರಿ ಪ್ರಣಾಮ್ಯ ಮತ್ತು ನಮ್ರತಾ ಅವರು ಕಾಲಭೈರವ ಅಷ್ಟಕ ಮತ್ತು ಮಹಿಷಾಸುರ ಮರ್ದಿನಿ ಸ್ತೋತ್ರವನ್ನು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ವಿವಿಧ ಆಟಗಳನ್ನು ಡಾ, ಭೂಮಿಕಾ ಆಡಿಸಿದರು.
ಶಿಬಿರದಲ್ಲಿ ಹರ್ಷಿತಾ, ಪ್ರತೀಕ್ಷಾ, ಯಶಸ್ವಿ, ಸಾಯಿ ಸಮರ್ಥ್, ಸಾಯಿ ಸೂರ್ಯ, ಶ್ರೀನಿಹಾಂತ್, ವೈಷ್ಣವಿ, ವಿವಿಕ್ತ, ಅನುಷಾ, ವಿಷ್ಣು, ಯಶಸ್ಸು, ಶಶಾಂಕ್, ಲಕ್ಷ್ಮೀ, ಮನಸಿರಿ, ಯುಕ್ತ, ಚಿರಾಣ್ಯ, ಜಶ್ವಿತಾ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.