ಕಲ್ಕತ್ತಾ ಯಾತ್ರೆಯ ಅನುಭವಗಳು ವರ್ಣನಾತೀತ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಅ.24




ತಾವು ಕೈಗೊಂಡ ಕಲ್ಕತ್ತಾ-ಬೇಲೂರು ಮಠದ ಯಾತ್ರೆಯ ಅನುಭವಗಳು ವರ್ಣನಾತೀತವಾದವು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ತಮ್ಮ ಕಲ್ಕತ್ತಾ ಯಾತ್ರೆಯ ಪ್ರವಾಸಾನುಭವಗಳನ್ನು ಭಕ್ತರೊಂದಿಗೆ ಹಂಚಿ ಕೊಂಡರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ನಡೆ
ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಂಜುಳಾ ಉಮೇಶ್,ಸಿ.ಎಸ್.ಭಾರತಿ ಚಂದ್ರಶೇಖರ್, ನಾಗರಾಜ್, ಕಾವೇರಿ ಸುರೇಶ್ ಯಾದವ್,ಸುಮನಾ ಕೋಟೇಶ್ವರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

