ಇಂದು ಸಿ.ಐ.ಟಿ.ಯು 8 ನೇ. ರಾಯಚೂರು ಜಿಲ್ಲಾ ಸಮ್ಮೇಳನ – ಹೆಚ್.ಶರ್ಪುದ್ದೀನ್ ಪೋತ್ನಾಳ್.
ಮಾನ್ವಿ ಅ.24




ಪಟ್ಟಣದ ನ್ಯೂ ಫ್ರೆಂಡ್ಸ್ ಫಂಕ್ಷನ್ ಹಾಲ್ ನಲ್ಲಿ ಅ.25 ರಂದು ಬೆಳಿಗ್ಗೆ 11 ಕ್ಕೆ ಸಿ,ಐ,ಟಿ,ಯು ಎಂಟನೇ ರಾಯಚೂರು ಜಿಲ್ಲಾ ಮಟ್ಟದ ಸಮ್ಮೇಳನವನ್ನು ಅಯೋಜಿಸಲಾಗಿದ್ದು.
ಸಮೇಳನದಲ್ಲಿ ರಾಯಚೂರು ಜಿಲ್ಲೆಯಲ್ಲಿ ಮುಂದಿನ ಮೂರು ವರ್ಷಗಳ ಕಾಲ ಕೈಗೊಳ್ಳ ಬೇಕಾದ ಕಾರ್ಯ ಯೋಜನೆಯನ್ನು ಚರ್ಚೆ ಮಾಡುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕಾಗಿ ಹೋರಾಟ ರೂಪಿಸಲು ನಿರ್ಣಯ ತೆಗೆದು ಕೊಳ್ಳಲಾಗುವುದು. ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿ ಅಂಗೀಕರಿಸಿಲಾಗುವುದು.
ಸಮ್ಮೇಳನವನ್ನು ಸಿ.ಐ.ಟಿ.ಯು ರಾಜ್ಯ ಕಾರ್ಯದರ್ಶಿ ಹಾಗೂ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಕಾಮ್ರೆಡ್ ಕೆ.ಮಹಾಂತೇಶ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಸಿ.ಐ.ಟಿ.ಯು ಜಿಲ್ಲಾ ಸಮಿತಿ ಅಧ್ಯಕ್ಷರಾದ ಕಾಮ್ರೆಡ್ ಎಚ್.ಪದ್ಮಾ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ನೌ.ಸಂಘದ ರಾಜ್ಯ ಉಪಾಧ್ಯಕ್ಷರಾದ ಕಾಮ್ರೆಡ್ ಆರ್.ಎಸ್.ಬಸವರಾಜ್, ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ ಡಿ.ಎಸ್. ಶರಣಬಸವ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕಾಮ್ರೆಡ್ ಕೆ.ಜಿ ವೀರೇಶ್, ಸಾಂಸ್ಕೃತಿಕ ಸಂಘಟನೆ ಸಮುದಾಯದ ರಾಜ್ಯ ಖಜಾಂಚಿಗಳಾದ ಎಸ್. ದೇವೇಂದ್ರಗೌಡ ಸಿಂಧನೂರು, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕಾಮ್ರೆಡ್ ರುದ್ರಪ್ಪ ನಾಯಕ, ಗ್ರಾಮ ಪಂಚಾಯಿತಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಕಾಮ್ರೆಡ್ ಮಲ್ಲಿಕಾರ್ಜುನ ಮನಸಲಾಪುರ, ಸಿ.ಐ.ಟಿ.ಯು ಜಿಲ್ಲಾ ಮುಖಂಡರುಗಳಾದ ಕಾಮ್ರೆಡ್ ಶಬ್ಬೀರ್ ಕಾಮ್ರೆಡ್ ಗಿರಿಯಪ್ಪ, ಕಾಮ್ರೆಡ್ ಹನೀಫ್, ಕಾಮ್ರೆಡ್ ರೇಣುಕಮ್ಮ, ಕಾಮ್ರೆಡ್ ವರಲಕ್ಷ್ಮಿ, ಕಾಮ್ರೆಡ್ ಅನ್ವರ್ ಪಾಷಾ ಇನ್ನಿತರ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಸಮ್ಮೇಳನದಲ್ಲಿ ಮುಂದಿನ ಮೂರು ವರ್ಷಕ್ಕೆ ನೂತನ ಜಿಲ್ಲಾ ಸಮಿತಿ ಆಯ್ಕೆನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷರು ಮಾನ್ವಿ ತಾಲೂಕ ಸಿ.ಐ.ಟಿ.ಯು ಅಧ್ಯಕ್ಷರಾದ ಹೆಚ್.ಶರ್ಪುದ್ದೀನ್ ಪೋತ್ನಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

