“ಪುರಂದರ ಮಂಟಪ ಶ್ರೀ ರಾಘವೇಂದ್ರ ಮಠ” – ಸಾಕ್ಷ್ಯ ಚಿತ್ರ ಬಿಡುಗಡೆ.

ಧಾರವಾಡ ಅ.25

ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ ಧಾರವಾಡದ ಪುರಂದರ ಮಂಟಪದ ಶ್ರೀ ರಾಘವೇಂದ್ರ ಮಠದ ಕುರಿತು ವಿದ್ಯಾ ವಿನಾಯಕ ಟ್ರಸ್ಟ್ ನಿರ್ಮಾಣದ ಶ್ರೀ ಸಿದ್ದಿ ವಿನಾಯಕ ಕಂಬೈನ್ಸ್ರವರ “ಪುರಂದರ ಮಂಟಪ ಶ್ರೀ ರಾಘವೇಂದ್ರಮಠ” ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಯಿತು.

ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿಯ ಪುರಂದರ ಮಂಟಪದಲ್ಲಿ ಮಠದ ಧರ್ಮದರ್ಶಿ ಮೇಲ್ವಿಚಾರಕರಾದ ಸಿ,ನಾಗರಾಜ ಬಿಡುಗಡೆ ಮಾಡಿದರು, ಪಂಡಿತ ಜಿ.ವಿ ನವಲಗುಂದ, ಮಠಾಧಿಕಾರಿಗಳಾದ ಪಂಡಿತ ಬಂಡಾಚಾರ್ಯ ಗಿಡದ ಹುಬ್ಬಳ್ಳಿ, ಡಾ, ಪ್ರಲ್ಹಾದ ಛಬ್ಬಿ, ಎನ್.ಡಿ ಕುಲಕರ್ಣಿ, ಜೋಶಿ, ವಿಜಯ ವಿಠಲಾಚರ್ಯ, ಬಸವರಾಜ ಹೂಗಾರ, ಅರವಿಂದ ನಾಗಜ್ಜನವರ, ಮುಜುಮದಾರ, ಸಿ.ವೇದವತಿ, ರತ್ನ ಜೋಶಿ, ಪದ್ಮ ನವಲಗುಂದ, ಹರಿಪ್ರಿಯ, ಶ್ರೀನಿವಾಸ, ಗುರುರಾಜ ದಂಪತಿಗಳು, ರಮೇಶ್, ಸಚಿನ್ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾ ವಿನಾಯಕ ಟ್ರಸ್ಟ್ ನಿರ್ಮಾಣದ ಈ ಸಾಕ್ಷ್ಯ ಚಿತ್ರಕ್ಕೆ ಸಾಹಿತ್ಯ. ಶ್ರೀ ಜೋಶಿ, ಛಾಯಾಗ್ರಹಣ ವಿನಾಯಕ ಬಸವಾ, ಸಂಗೀತ ರಜತ ಬಸವಾ, ಸ್ತುತಿ ಶ್ರೀಮತಿ ಆಶಾ ಆಚಾರ್ಯ, ಸಂಕಲನ ಸಿದ್ಧಾರ್ಥ್ ಜಾಲಿಹಾಳ, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಡಿಜೈನ್ ನಟರಾಜ ಪತ್ತಾರ, ಸಹಕಾರ. ಡಾ, ಕಲ್ಮೇಶ್ ಹಾವೇರಿಪೇಟ್, ಕಿಶನರಾವ್ ಎಂ ಕುಲಕರ್ಣಿ, ಎನ್.ಎಸ್ ಪಾಟೀಲ, ಪ್ರಮೋದ್ ಜೋಶಿ, ಶ್ರೀಮತಿ ಲತಾ ಎಂ ಜೋಶಿ, ಶ್ರೀಮತಿ ಕೀರ್ತಿ ಅರವಿಂದ, ನಿರ್ವಹಣೆ ಆನಂದ ಜೋಶಿ, ರಘು ತುಮಕೂರು ಅವರದಿದ್ದು, ಕಿರುಚಿತ್ರ, ಚಲನ ಚಿತ್ರಗಳ ನಿರ್ದೇಶಕ ಅರವಿಂದ ಮುಳಗುಂದ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಾಕ್ಷ್ಯ ಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ.

*****

– ಡಾ, ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button