ಕನ್ನಡ ಬಾವುಟಕ್ಕೆ ಸರಕಾರದ ಮಾನ್ಯತೆ ನೀಡಬೇಕು – ಚುಟುಕು ಸಾಹಿತ್ಯ ಪರಿಷತ್ತಿನ ಮನವಿ.
ಮಾನ್ವಿ ಅ.25


ರಾಜ್ಯದ ಅಸ್ಮಿತೆಯ ಸಂಕೇತವಾದ ಹಳದಿ ಕೆಂಪು ನಾಡ ಬಾವುಟಕ್ಕೆ ಸರಕಾರದಿಂದ ಅಧಿಕೃತ ಮಾನ್ಯತೆ ನೀಡ ಬೇಕೆಂಬುದು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹ್ಮದ್ ಮುಜೀಬ್ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರರ ಮುಖಾಂತರ ಮನವಿ ಮಾತನಾಡಿದ ಅವರು “ಕನ್ನಡ ಬಾವುಟ ನಮ್ಮ ಅಸ್ತಿತ್ವದ, ಗೌರವದ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ. ೧೯೫೬ ರಲ್ಲಿ ಏಕೀಕೃತ ರಾಜ್ಯವಾಗಿ ರೂಪುಗೊಂಡ ಕರ್ನಾಟಕ ಇಂದು ೫೨ ನೇ. ವರ್ಷಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನಾಡ ಬಾವುಟಕ್ಕೆ ಸರಕಾರದ ಮಾನ್ಯತೆ ದೊರೆತರೆ ಅದು ಇತಿಹಾಸ ನಿರ್ಮಾಣವಾಗುತ್ತದೆ. ಹಲವು ಸಾಹಿತಿಗಳು, ತಜ್ಞರು ಹಾಗೂ ಕನ್ನಡ ಅಭಿಮಾನಿಗಳು ರಾಜ್ಯ ಧ್ವಜಕ್ಕೆ ಮಾನ್ಯತೆ ನೀಡುವುದು ಸಂವಿಧಾನದ ವ್ಯಾಪ್ತಿಯಲ್ಲೇ ಸಾಧ್ಯವೆಂದು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಈ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ ಸರಕಾರವು ಹಳದಿ ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕು,” ಎಂದು ಹೇಳಿದರು.

ಅವರು ಮುಂದುವರಿಸಿ “ಕನ್ನಡದ ಗೌರವಕ್ಕಾಗಿ, ಯುವಪೀಳಿಗೆಗೆ ಪ್ರೇರಣೆ ನೀಡಲು ಹಾಗೂ ರಾಜ್ಯದ ಏಕತೆಯ ಸಂಕೇತವಾಗಿ ನಾಡ ಬಾವುಟವನ್ನು ಅಧಿಕೃತವಾಗಿ ಗುರುತಿಸುವುದು ಅವಶ್ಯಕ. ನಾಡ ಬಾವುಟಕ್ಕೆ ಮಾನ್ಯತೆ ಸಿಕ್ಕರೆ ಅದು ಕನ್ನಡಿಗರ ಆತ್ಮಗೌರವದ ವಿಜಯದ ದಿನವಾಗುತ್ತದೆ,” ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಆಂಜನೇಯ ನಸ್ಲಾಪುರ, ಚನ್ನಬಸಯ್ಯ ಸ್ವಾಮಿ, ನರಸಪ್ಪ ಜೂಕುರು, ದೊಡ್ಡಣ್ಣ ಹೂಗಾರ, ರಾಮು ಹೊಳೆಪ್ಪನವರ, ಮನೋಹರ ವಿಶ್ವಕರ್ಮ, ಹನುಮಂತ ಸೀಕಲ್, ಮುತ್ತಣ್ಣ, ಹೊನ್ನಪ್ಪ ಕಟ್ಟಿಮನಿ, ಸಂಜೀವಪ್ಪ ಚೆಲುವಾದಿ, ಬಿ.ವಿಶ್ವನಾಥ, ರಾಮು ನೀರಮಾನ್ವಿ, ಶಿವಕುಮಾರ್ ಚಲ್ಮಲ್, ನಾಗರಾಜ ಸೇರಿದಂತೆ ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರು, ಕನ್ನಡ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

