ಕಷ್ಟ, ಸುಖ ಸಮಾನಂತರದಲ್ಲಿ ಸ್ವೀಕರಿಸಿ – ಚನ್ನಪ್ಪ.ಹರಸೂರ.
ಕಂದಗಲ್ಲ ಅ.24


ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ ಹಬ್ಬವು ವಿಶೇಷವಾದದ್ದು ಎಲ್ಲರ ಬಾಳಿನಲ್ಲಿಯೂ ಬೆಳಕನ್ನು ತಂದು ಕತ್ತಲೆಯಿಂದ ಬೆಳಕಿ ನೆಡೆಗೆ ನಮ್ಮ ಬಾಳು ಸಾಗಲಿ ಎಂದು ಸಂದೇಶ ಸಾರುವ ಹಬ್ಬ, ಗುರು ಹಿರಿಯರು ಹೇಳಿದ ಹಾಗೆ ಜೀವನದಲ್ಲಿ ಕಷ್ಟ-ಸುಖ ಎರಡು ಮುಖದ ಒಂದು ನಾಣ್ಯವಿದ್ದಂತೆ. ಎರಡನ್ನೂ ನಾವು ಸಮಾನವಾಗಿ ತೆಗೆದು ಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು. ಬಣಗಾರ್ ಸಿಂಪಿ ಸಮಾಜದ ಆರಾಧ್ಯ ಕುಲ ದೇವರು ಲಿಂಗಸಗೂರು ತಾಲೂಕಿನ ಸುಕ್ಷೇತ್ರ ನವಿಲೆಯಲ್ಲಿ ನಡೆಯುವ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆಯ ದಿವಸ ನಡೆಯುವ ವಿಶೇಷ ಪೂಜೆ ಹಾಗೂ ಅನ್ನ ದಾಸೋಹ ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು ಎಲ್ಲ ಸಮಾಜ ಬಾಂಧವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಊರಿಂದ ಹಾಗೂ ನವಲಿ ಮತ್ತು ಸುತ್ತಮುತ್ತಲಿನಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸುಕ್ಷೇತ್ರ ನವಲಿ ಶ್ರೀ ಜಡೆಯ ಶಂಕರಲಿಂಗ ದೇವರ ಆಶೀರ್ವಾದ ಪಡೆಯಬೇಕು. ಎಲ್ಲಾ ನಮ್ಮ ಸಮಾಜ ಬಾಂಧವರು ಹಾಗೂ ಸದ್ಭಕ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸುರಪುರದ ಪ್ರಕಾಶ ಬಣಗಾರ ಕರೆ ನೀಡಿದರು.
ಸುಕ್ಷೇತ್ರ ನವಲಿ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ದೀಪಾವಳಿಯ ಅಮಾವಾಸ್ಯೆಯ ನಿಮಿತ್ಯ ಬೆಳಿಗ್ಗೆ ರುದ್ರಾಭಿಷೇಕ ವಿಶೇಷ ಪೂಜೆ ಮತ್ತು ಅನ್ನದಾಸೋಹ ಕಾರ್ಯಕ್ರಮ ನಡೆಯಿತು.
ಈ ದೀಪಾವಳಿ ಅಮಾವಾಸ್ಯೆ ವಿಶೇಷ ಅನ್ನದಾಸೋಹ ಸೇವೆಯನ್ನು ದಿ. ಶ್ರೀಮತಿ ಲಿಂಗಮ್ಮ ಶಂಕ್ರಪ್ಪ ಸಿಂಪಿ ಮಕ್ಕಳು ಅವರ ಕುಟುಂಬ, ಶಾಂತೇಶ್ ಸಿಂಪಿ ನಿವೃತ್ತ ಕೃಷಿ ಅಧಿಕಾರಿಗಳು, ಗುರುಪಾದಪ್ಪ ಸಿಂಪಿ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರು, ಅಶೋಕ್ ಸಿಂಪಿ ನಿವೃತ್ತ ವಾಣಿಜ್ಯ ಅಧಿಕಾರಿಗಳು, ದಿ.ಬಸರಾಜ್ ಸಿಂಪಿ ಇವರ ಕುಟುಂಬದವರು ದೀಪಾವಳಿ ಅಮಾವಾಸ್ಯೆಯ ದಾಸೋಹ ಸೇವೆ ಸಲ್ಲಿಸಿದರು. ಆ ಜಡೆಯ ಶಂಕರಲಿಂಗನ ಆಶೀರ್ವಾದ ಸದಾ ಇವರ ಕುಟುಂಬದ ಮೇಲಿರಲಿ.ಇನ್ನೂ ಹೆಚ್ಚಿನ ಭಕ್ತಿಯ ಸೇವೆಯನ್ನು ಮಾಡಲು ಇವರಿಗೆ ಶಕ್ತಿ ನೀಡಲಿ ಎಂದು ಆಗಮಿಸಿದ ಭಕ್ತರು ಪ್ರಾರ್ಥಿಸಿದರು.
ಬಣಗಾರ್ ಸಮಾಜ ಬಾಂಧವರು ನವಲಿ ಸೇರಿದಂತೆ ಸುತ್ತಮುತ್ತಲಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿ ಶ್ರೀ ಜಡೆಯ ಶಂಕರಲಿಂಗ ದೇವರ ಕೃಪೆಗೆ ಪಾತ್ರರಾದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ
