ಕೊಟ್ಟೂರು ತಾಲೂಕು ಸಮಗ್ರ ಅಭಿವೃದ್ಧಿಗೆ ಸರ್ಕಾರದ – ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ.
ಕೊಟ್ಟೂರು ಅ.28


ಪಟ್ಟಣ ಅನೇಕ ಸಂಘಟನೆಗಳ ಹೋರಾಟದ ಫಲವಾಗಿ ನೂತನ ತಾಲೂಕು ಕೇಂದ್ರ ರಚನೆ ಗೊಂಡಿತು. ತಾಲೂಕು ಎಂದು ಘೋಷಣೆ ಮಾಡಿದ ನಂತರ ಈ ಭಾಗದ ಜನರ ನಿರೀಕ್ಷೆಗಳು, ಆಶಾ ಭಾವನೆಗಳು ಗಗನ ದೆತ್ತರಕ್ಕೆ ಚಿಮ್ಮಿದ್ದವು ಆದರೆ ತಾಲೂಕು ರಚನೆ ಗೊಂಡು ಸುಮಾರು 7-8 ವರ್ಷಗಳು ಕಳೆದರು ಜನ ಸಾಮಾನ್ಯರಿಗೆ ಅತ್ಯವಶ್ಯಕವಾದ ಬೇಕಾಗಿರುವ ಕಛೇರಿಗಳು ಇದು ವರೆಗೂ ತೆರೆಯದಿರುವುದು ಈ ಭಾಗದ ಜನ ಪ್ರತಿನಿಧಿಗಳ ಹಾಗೂ ಸರ್ಕಾರದ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಎ.ಐ.ಡಿ.ಆರ್.ಎಂ. ಸಂಘಟನೆ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ್ ಸರ್ಕಾರದ ಇಬ್ಬಗಿಯ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ಟೂರು ತಾಲೂಕಿನ ಎ.ಐ.ಕೆ.ಎಸ್ ಮತ್ತು ಎ.ಐ.ಡಿ.ಆರ್.ಎಂ ಹಾಗೂ ಎನ್.ಎಫ್.ಐ.ಡಬ್ಲ್ಯು ದೇವದಾಸಿ ಸಂಘಟನೆ, ಇತರೆ ಸಾಮೂಹಿಕ ಸಹ ಭಾಗಿತ್ವದಲ್ಲಿ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಪಟ್ಟಣದ ವಿವಿಧ ಮುಖ್ಯ ರಸ್ತೆಗಳ ಮೂಲಕ ಪ್ರತಿಭಟನೆ ಮಾಡಿ ತಹಶೀಲ್ದಾರ್ ಅಮರೇಶ ಇವರಿಗೆ ಮನವಿ ಸಲ್ಲಿಸಿ ಅನಿರ್ದಿಷ್ಟಾವಧಿಗೆ ತಾಲೂಕು ಕಛೇರಿ ಮುಂಭಾಗದಲ್ಲಿ ಮುಷ್ಕರ ನಡೆಸಿದರು.

ಕೊಟ್ಟೂರು ಪಟ್ಟಣ ಸಂಪರ್ಕ ಮಾಡುವ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾನವ ದಿನಗಳನ್ನು 100 ಬದಲಾಗಿ 200 ದಿನಕ್ಕೆ ಹೆಚ್ಚಿಸಬೇಕು ಹಾಗೂ ಕೂಲಿ ಹಣ 600 ಕ್ಕೆ ಹೆಚ್ಚಿಸಬೇಕು, ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಉದ್ಯೋಗ ಖಾತ್ರಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು.ತಾಲೂಕಿನ ಬಡ ಕುಟುಂಬಗಳಿಗೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು ದೇವದಾಸಿ ಮಹಿಳೆಯರಿಗೆ ಪ್ರತಿ ತಿಂಗಳು ಮಾಸಾಶನ ನೀಡುವಂತೆ ಕ್ರಮ ವಹಿಸಬೇಕು. ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಬೇಕು, ತಾಲೂಕಿಗೆ ಅಗತ್ಯವಾಗಿ ಬೇಕಾಗಿರುವ ಬಿ.ಇ.ಓ ಕಛೇರಿ, ನೋಂದಣಿ ಕಛೇರಿ, ಲೋಕೋಪಯೋಗಿ ಇಲಾಖೆ, ಮುಂತಾದ ಕಛೇರಿ ತೆರೆಯ ಬೇಕು, ಬಡ ವಿಧ್ಯಾರ್ಥಿಗಳಿಗಾಗಿ ಉನ್ನತ ಶಿಕ್ಷಣಕ್ಕಾಗಿ ಪದವಿ ಕಾಲೇಜು ತೆರೆಯ ಬೇಕು. ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ತಡೆಯ ಬೇಕೆಂದು ಅನೇಕ ಬೇಡಿಕೆಗಳೊಂದಿಗೆ ಸಮಗ್ರ ಕೊಟ್ಟೂರು ಅಭಿವೃದ್ಧಿಗಾಗಿ ಇಂದು ವಿವಿಧ ಸಂಘಟನೆಗಳ ಸಹಕಾರದ ಸಹ ಭಾಗಿತ್ವದಲ್ಲಿ ಅನಿರ್ದಿಷ್ಟಾವಧಿಗೆ ಮುಷ್ಕರ ಕೈಗೊಂಡಿದ್ದೇವೆ ಎಂದು ಸಿ.ಪಿ.ಎಂ ತಾಲೂಕು ಕಾರ್ಯದರ್ಶಿ ಕೆ.ರೇಣುಕಮ್ಮ ಹೇಳಿದರು.
ಈ ಪ್ರತಿಭಟನೆ ಸಂದರ್ಭದಲ್ಲಿ ಜಿಲಾಸ್ ಬಿ.ರೇಣುಕಮ್ಮ, ದುರುಗಮ್ಮ, ಹಾಲಮ್ಮ, ನಾಗರಾಜ, ಕೋವಿ ನಾಗಮ್ಮ, ಎಸ್.ಎಂ. ಮಂಜುಳ ಇತರರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

