“ನಿರೂಪಕಿ ಅಪರ್ಣ ರವರಿಗೆ ಭಾವ ಪೂರ್ಣ ನುಡಿ ನಮನ”…..

ಮತ್ತೇ ಹುಟ್ಟಿ ಬನ್ನಿ ಓ ಕರುನಾಡ ಕಂಠಸಿರಿಯೇಕನ್ನಡ ನಾಡಿನ ಮುದ್ದಿನ ಕುವರಿಯೇಚಂದನ ವನದ ಐಸಿರಿಯೆ ಸುಂದರ, ಚೆಂದದ ಭಾಷೆಯ ಅಂದದಿ ನುಡಿವ ಕನ್ನಡತಿಯೆನಿರೂಪಕಿಯಾಗಿ, ನಟಿಯಾಗಿನಿಮ್ಮ ಸೇವಾ ಕೈಂಕರ್ಯ ಮಹತ್ವ ಪೂರ್ಣ ನಿಮ್ಮ ಜೀವನವೇ ಮಹಾ ಸಮರ್ಪಣ ||1||

ಅಪ್ಪಟ ಕನ್ನಡವನು ಸ್ಪಷ್ಟವಾಗಿ ಉಳಿಯುವ ಕನ್ನಡದ ಕೋಗಿಲೆಯಸರಳತೆಯನ್ನು ಮೈದಂಬಿ ಕೊಂಡ ಮುಗ್ಧ ಮನದ ಅರಸಿಯೇಸದಾ ಹಸನ್ಮುಖತೆ, ಜೀವನೋತ್ಸಹ ಎದ್ದು ಕಾಣುವ ಮುಖ ಭಾವ ಇತರರಿಗೆ ಮಾದರಿಯಾಗುವ ಅಪ್ರಮೇಯ ವ್ಯಕ್ತಿತ್ವವೆಮತ್ತೆ ಹುಟ್ಟಿ ಬನ್ನಿ ಓ ಕರುನಾಡ ಕಂಠ ಸಿರಿಯೇ ||2||
ತಮ್ಮ ಅಪ್ರತಿಮ ನಡೆಯಿಂದ, ಅಪೂರ್ವ ನುಡಿಗಳಿಂದಕನ್ನಡಿಗರ ಮನ ಗೆದ್ದ ಕರುನಾಡಿನ ಅನನ್ಯ ಚೇತನವೇರವಿ ತೇಜಸಂತೆ ತನ್ನ ಕಾಂತಿಯನುಸುತ್ತಲು ಪಸರಿಸುತ್ತಾ ಇತರರಿಗೆಬೆಳಕು ಕೊಡುವ ದಿವ್ಯ ಚೇತನವೇನೋವಿನಲ್ಲೂ ನಗೆಯ ಚಿಮ್ಮಿಸಿ ಇತರರನ್ನು ನಗಿಸುವ ನಗೆಯ ಕಾರ಼ಂಜಿಯೆಮತ್ತೆ ಹುಟ್ಟಿ ಬನ್ನಿ ಓ ಕರುನಾಡ ಕಂಠ ಸಿರಿಯೇ ||3||
ನಿಮ್ಮ ಮುಗ್ಧ – ಸ್ನಿಗ್ಧ ನಗುವಿನಿಂದಶುದ್ಧ, ಸ್ಪಷ್ಟ ನುಡಿಗಳಿಂದ ಕನ್ನಡಿಗರ ಹ್ರೃನ್ಮನಗಳಲ್ಲಿ ರಾರಾಜಿಸುತಿರುವ ಅಪೂರ್ವ ಮಾಣಿಕ್ಯವೇನಿಮ್ಮ ಮಧುರ ಕಂಠಕ್ಕೆ ಮನ ಸೋತು ಆ ದೇವರೇ ನಿಮ್ಮನ್ನು ತನ್ನೆಡೆಗೆ ಸೆಳೆದಿರುವ ನಮ್ಮೆಲ್ಲರನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದಮಸಣದ ಹೂವೆಮತ್ತೆ ಹುಟ್ಟಿ ಬನ್ನಿ ಓ ಕರುನಾಡ ಕಂಠಸಿರಿಯೇ ||4||
ಸುಂದರ, ಸುಮಧುರ ನುಡಿಯ ಸಾರಥಿಯೆ ನಿರೂಪಣೆಯೇ ನಿಮ್ಮ ಜೀವನಾಡಿ ಸ್ಪಷ್ಟ, ಶುದ್ದ ಮಾತಿನ ಮೋಡಿಯಿಂದ ಎಲ್ಲರ ಮನ ಸೂರೆಗೊಂಡ ಕನ್ನಡದ ಅರಸಿಯೆನಿಮ್ಮ ಅಗಲಿಕೆಯಿಂದ ಅನಾಥವಾಗಿದೆ ಕನ್ನಡ ಸಾರಸ್ವತ ಲೋಕನೀವ್ ಅಗಲಿದರೂ ನಿಮ್ಮ ಹೆಸರುಸಾಧನೆಗಳು ಅಮರ ಅಜರಾಮರಮತ್ತೇ ಹುಟ್ಟಿ ಬನ್ನಿ ಓ ಕರುನಾಡ ಕಂಠ ಸಿರಿಯೇ ||5||
ಎಂ.ಎಸ್.ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆ ಶಾಖೆ


