ಅಪ್ರಾಪ್ತ ಬಾಲಕಿಯ ಸೌಜನ್ಯ ಹಡಪದ ಕೊಲೆ ಖಂಡಿಸಿ ಯಾದಗಿರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಡಪದ ಅಪ್ಪಣ್ಣ ಸಮಾಜದ – ಬೃಹತ್ ಹೋರಾಟ ಯಶಸ್ವಿಯಾಗಿ ಜರುಗಿತು.

ಕೋಡೆಕಲ್ ಅ.30

ಯಾದಗಿರ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದಲ್ಲಿ ಪ್ರಥಮ ಪಿ.ಯು.ಸಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ದಿಂ// ಸೌಜನ್ಯ ಹಡಪದ ಅವರನ್ನು ಅಪಹರಿಸಿ ಕ್ರೂರವಾಗಿ ಹತ್ಯೆ ಮಾಡಿ ಶವವನ್ನು ಕಾಲುವೆಯಲ್ಲಿ ಬಿಸಾಕಿದ ಘಟನೆಯು ಜಿಲ್ಲೆಯಾದ್ಯಂತ ಆಕ್ರೋಶ ಹುಟ್ಟಿಸಿದೆ.ಈ ನೃಶಂಸ ಕೊಲೆಯನ್ನು ಖಂಡಿಸಿ ಇಂದು ಯಾದಗಿರ ಜಿಲ್ಲಾಧಿಕಾರಿ ಕಚೇರಿ ಎದುರು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಬೃಹತ್ ಹೋರಾಟ ಯಶಸ್ವಿಯಾಗಿ ಜರುಗಿತು. ಪ್ರತಿಭಟನಾಕಾರರು ಉಗ್ರ ಘೋಷಣೆಗಳನ್ನು ಕೂಗಿ, “ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು ಹಾಗೂ ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.ಸಮಾಜದ ನಾಯಕರ ಆರೋಪದ ಪ್ರಕಾರ, ಸೌಜನ್ಯ ಕಾಣೆಯಾದ ಬಗ್ಗೆ ಕುಟುಂಬವು ಕೋಡೆಕಲ್ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಕೇಸ್ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ.

ಇದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ಖಂಡಿಸಿದರು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆಯ ನಂತರ ಸಮಾಜದ ಪ್ರತಿನಿಧಿಗಳು ಜಿಲ್ಲಾಧಿಕಾರಿಯ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಹೋರಾಟದಲ್ಲಿ ಯಾದಗಿರ ಜಿಲ್ಲಾ ಅಧ್ಯಕ್ಷ ಡಾ, ಮಲ್ಲಿಕಾರ್ಜುನ ಹಡಪದ ಕುಳಗೇರಿ ಅವರ ನೇತೃತ್ವದಲ್ಲಿ ನೂರಾರು ಹಡಪದ ಅಪ್ಪಣ್ಣ ಸಮಾಜದ ಸದಸ್ಯರು ಭಾಗವಹಿಸಿದರು.

ಮತ್ತು ಸಮಾಜದ ಗಣ್ಯ ನಾಯಕರಾದ ಈರಣ್ಣ ಸಿ. ಹಡಪದ (ಸಣ್ಣೂರ – ಕಲಬುರಗಿ ಜಿಲ್ಲಾ ಅಧ್ಯಕ್ಷರು), ಬಸವರಾಜ ಹಡಪದ (ಸುಗೂರ ಎನ್ ಕಲಬುರಗಿ ಗೌರವಾಧ್ಯಕ್ಷರು), ಬಸವರಾಜ ಸಿ. ಹಡಪದ (ಹಳ್ಳಿ ಶಹಾಬಾದ್ ಮಾಜಿ ಸಂಘಟನಾ ಕಾರ್ಯದರ್ಶಿ), ಸಮಾಜದ ಹಿರಿಯರು ಅಯ್ಯಣ್ಣ ಹಡಪದ (ಇಬ್ರಾಹಿಂಪೂರ), ಹಣಮಂತ್ರಾಯ ಹಡಪದ (ಹುಣಸಗಿ ತಾಲೂಕು ಅಧ್ಯಕ್ಷ), ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ (ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ಹಡಪದ (ಸಾವಳಗಿ ಕಲಬುರಗಿ ನಗರಾಧ್ಯಕ್ಷ), ತಿಪ್ಪಣ್ಣ ಹಡಪದ (ನರಿಬೋಳ – ಜೇವರ್ಗಿ ತಾಲೂಕು ಅಧ್ಯಕ್ಷ), ಸಿದ್ರಾಮ ಹಡಪದ (ಯಾಗಾಪೂರ – ಶಹಾಬಾದ್ ತಾಲೂಕು ಅಧ್ಯಕ್ಷ), ರಮೇಶ್ ಕೊಲ್ಲೂರು (ಚಿತ್ತಾಪುರ ತಾಲೂಕು ಅಧ್ಯಕ್ಷ), ಶರಣಬಸ್ಸು (ಶಹಾಪೂರ ತಾಲೂಕು ಅಧ್ಯಕ್ಷ). ರೇವಣಸಿದ್ದ ಮಾಲಗತ್ತಿ, ರವಿ ಹಡಪದ ಎಲ್ಲೆರಿ, ಅಂಬ್ರೇಶ ವಡಗೇರಿ , ಮಲ್ಲಿಕಾರ್ಜುನ ಮದ್ರಕಿ, ಮಲ್ಲಿಕಾರ್ಜುನ ದೋರಹನಹಳ್ಳಿ.ಸುಭಾಶಚಂದ್ರ ಹಡಪದ, ದೇವು ನೀರಲಗಿ, ಬಸವರಾಜ ಹಡಪದ ಮುದ್ದನೂರ. ಅಪ್ಪಣ ಮಾಲಗತ್ತಿ ,ಭಾಗಣ್ಣ ಹಡಪದ ನಾರಾಯಣಪುರ.

ಮಲ್ಲು ಹಡಪದ ಮುದ್ದನೂರ. ನಾಗರಾಜ ಹಡಪದ ಸಾತನೂರ. ಬಸವರಾಜ ಕಡ್ನಳ್ಳಿ. ಈಶ್ವರ ಅರಿಕೇರಿ,ಶರಣು ಹಡಪದ ಕೊಲ್ಲೂರು, ಶೇಕಣ್ಣ ಹಡಪದ ದಂಡಗುಂಡ.ಶಿವುಕುಮಾರ ಹಡಪದ ಕೊಳ್ಳಿ ನಾಲವಾರ. ಹಾಗೂ ಭಾಗಣ್ಣ ಹಡಪದ ರಾವೂರ ವಡಗೇರಿ, ಶರಣಪ್ಪ ಹಡಪದ ಚಟ್ನಳ್ಳಿ. ಸಂಗಮೇಶ ಹಡಪದ ಮಾರಡಗಿ, ಶ್ರೀಮಂತ ಹಡಪದ ಕಲಬುರಗಿ ಅರನೂರ. ಸಿದ್ದು ಹಡಪದ ನಾಲವಾರ.ಭೀಮು ಹಡಪದ ಶಿರವಾಳ, ಶಂಕರ ಹಡಪದ ಹರವಾಳ, ಸೇರಿದಂತೆ ಸಮಾಜದ ಅನೇಕ ಮುಖಂಡರು ಮತ್ತು ನೂರಾರು ಸ್ವಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.ಸಮಾಜದವರು ಈ ಘಟನೆಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button