ಬಾಲಗೋಪಾಲನ ದರ್ಶನಭಾಗ್ಯ ಪಡೆದ ಧೀರಸಾಧಕಿ ಗೋಪಾಲೇರ್ ಮಾ – ಶ್ರೀಮತಿ ಮಂಜುಳಾ.ಉಮೇಶ್ ಅಭಿಮತ.
ಚಳ್ಳಕೆರೆ ನ.01

ಬಾಲಗೋಪಾಲನ ದಿವ್ಯ ದರ್ಶನ ಭಾಗ್ಯ ಪಡೆದ ಧೀರಸಾಧಕಿ ಗೋಪಾಲೇರ್ ಮಾ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಂಜುಳಾ ಉಮೇಶ್ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಜಗದ್ಧಾತ್ರಿ ಪೂಜೆ”ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-2″ರ ಗ್ರಂಥ ಪಾರಾಯಣ ಮಾಡುತ್ತ “ವರವಾದ ವೈಧವ್ಯ” ಎಂಬ ಅಧ್ಯಾಯವನ್ನು ವಾಚಿಸಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಠಣ,ಮಾ ನಾಮ ಸಂಕೀರ್ತನೆ,ದೇವಿ ಭಜನೆಗಳು ಹಾಗೂ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.
ಸತ್ಸಂಗ ಸಭೆಯಲ್ಲಿ ಶ್ರೀಮತಿ ಎಂ.ಗೀತಾ ನಾಗರಾಜ್, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಅಂಬುಜಾ ಶಾಂತಕುಮಾರ್, ಉಷಾ ಶ್ರೀನಿವಾಸ್, ರಶ್ಮಿ ವಸಂತ, ಯಶಸ್ವಿ, ಯತೀಶ್.ಎಂ ಸಿದ್ದಾಪುರ, ಪಂಕಜ ಚೆನ್ನಪ್ಪ, ಅಶ್ವಿನಿ, ಸುಧಾಮಣಿ, ಸರಸ್ವತಿ, ಜಿ.ಯಶೋಧಾ ಪ್ರಕಾಶ್, ವೆಂಕಟಲಕ್ಷ್ಮೀ, ಚೇತನ್, ಪುಷ್ಪಲತಾ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

