ಜಕ್ಕಲಿ ಪ್ರಾಥಮಿಕ ಶಾಲೆಯಲ್ಲಿ ಅರ್ಥಪೂರ್ಣ – ಕನ್ನಡ ರಾಜ್ಯೋತ್ಸವ ಆಚರಣೆ.

ಜಕ್ಕಲಿ ನ.01

ಗದಗ ಜಿಲ್ಲಾ ರೋಣ ತಾಲೂಕು ಜಕ್ಕಲಿ ಗ್ರಾಮದದಲ್ಲಿ ನವೆಂಬರ್ 1 ಶನಿವಾರ ರಂದು 70 ನೇ. ಕನ್ನಡ ರಾಜ್ಯೋತ್ಸವವನ್ನು ಎಚ್.ಪಿ.ಕೆ.ಜಿ.ಎಸ್ ಬಾಲಕರ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಮತ್ತು ಎಚ್.ಪಿ.ಕೆ.ಜಿ.ಎಸ್ ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಕಿರಿಯ ಉರ್ದು ಶಾಲೆಯಲ್ಲಿ ಶಾಲೆಯ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ 70 ನೇ. ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನೆರವೇರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಂದಪ್ಪ.ಆರ್ ಮಾದರ ವಹಿಸಿ ಕೊಂಡಿದ್ದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಎಸ್.ಡಿ.ಎಂ.ಸಿ ಸದಸ್ಯರು ಮುತ್ತಪ್ಪ ಕಾಳಿ. ಮುತ್ತಪ್ಪ ಮರಬಸಪ್ಪನವರ. ರಜಾಕ್ ಅಮ್ಮದ ಗಡಾದ್. ಕುಬೇರಪ್ಪ ಕೊಡಗಾನೂರು ಹಣಮಂತ ಭಜಂತ್ರಿ ಕವಿತಾ ಹಾಗೂ ಎಚ್.ಪಿ.ಕೆ.ಜಿ.ಎಸ್ ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರು ಎಸ್.ಬಿ ಗವಿ ಮತ್ತು ಎಚ್.ಪಿ.ಕೆ.ಜಿ.ಎಸ್ ಬಾಲಕರ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎ.ಬಿ.ಜಕ್ಕಲಿ ವಹಿಸಿ ಕೊಂಡಿದ್ದರು.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಂದಪ್ಪ ರಾಮಪ್ಪ ಮಾದರ ಅವರು ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಮರ್ಪಿಸಿದರು.

ಶಾಲೆಯ ಅನೇಕ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕನ್ನಡ ಕುರಿತು ಮಾತುಗಳನ್ನಾಡುವದರ ಮೂಲಕ ನಾಡಿನ ಸಮಸ್ತ ಜನತೆಗೆ 70 ನೇ. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಹೇಳಿದರು.

ಕಾರ್ಯಕ್ರಮದ ಮುಖ್ಯತಿಥಿಗಳ ಮಾತುಗಳನ್ನಾಡಿದ ಎಚ್.ಪಿ.ಕೆ.ಜಿ .ಎಸ್ ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರು ಎಸ್.ಬಿ ಗವಿ. ಈ ಗ್ರಾಮದಲ್ಲಿ ಒಂದು ಐತಿಹಾಸಿಕ ಇತಿಹಾಸವಿದೆ ನಮ್ಮ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರು ಕರ್ನಾಟಕ ಏಕೀಕರಣದ ರೂವಾರಿಗಳಲ್ಲಿ ಒಬ್ಬರು. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಒಗ್ಗೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರು ಮುಂಬಯಿ ಮತ್ತು ಮದ್ರಾಸ್ ಶಾಸನ ಸಭೆಗಳಲ್ಲಿ ಕರ್ನಾಟಕದ ಪರವಾಗಿ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದಂತೆ ಪ್ರಮುಖ ಚರ್ಚೆಗಳನ್ನು ನಡೆಸಿದರು. ನವೆಂಬರ್ ಬಂತು ಅಂದರೆ ಕರ್ನಾಟಕ ರಾಜ್ಯೋತ್ಸವದ ಸಡಗರ, ಹಬ್ಬ ರಾಜ್ಯವನ್ನು ಆವರಿಸಿ ಬಿಡುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯ ಮಾತುಗಳನ್ನಾಡಿದ ಅಂದಪ್ಪ ಮಾದರ. ರಾಜ್ಯದ ಹೆಮ್ಮೆ ಸಂಸ್ಕೃತಿ, ಮತ್ತು ಕನ್ನಡ ಭಾಷೆಯ ಮಹತ್ವವನ್ನು ಒತ್ತಿ ಹೇಳುವಂತಿವೆ. ಈ ನುಡಿಗಳು ಕನ್ನಡಿಗರ ಹೆಮ್ಮೆಯ ಸಂಕೇತವಾಗಿವೆ ಮತ್ತು ಕನ್ನಡ ತಾಯಿಯ ಪ್ರೀತಿಯನ್ನು ನೆನಪಿಸುತ್ತವೆ. ಉದಾಹರಣೆಗೆ “ನಮ್ಮ ಕನ್ನಡ, ನಮ್ಮೆಲ್ಲರ ಹೆಮ್ಮೆ” ಅಥವಾ “ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ.ಶಿಕ್ಷಕರು ವಿ.ಎ ಕುಂಬಾರ್. ಎಮ್.ವಿ ತಾಳಿಕೋಟಿ. ಎ.ಪಿ ಶೆಟ್ಟರ್. ಸಿ.ಎಸ್ ಬೆಳ್ಳಟ್ಟಿ. ಎಸ್.ಎ ಪಲ್ಲೆದ. ಸಿ.ಎಸ್ ಘೋಡೆಸವಾರ. ವಿ.ಎಸ್ ದಿಂಡೂರ್. ಪಿ.ಜಿ ಹುಯಿಲಗೋಳ. ಎಸ್.ಎಸ್ ಯಲ್ಲರಡ್ಡಿ. ಎ.ಎಂ ಸೂರ್ಯಭಠ.ಇನ್ನೂ ಅನೇಕ ಶಿಕ್ಷಕ ಶಿಕ್ಷಕಿಯರು ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಸೇರಿದಂತೆ ಮುದ್ದು ಮಕ್ಕಳು ಇನ್ನೂ ಅನೇಕರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button