ಶ್ರೀಶಾರದಾಶ್ರಮದಲ್ಲಿ “ವರವಾದ ವೈಧವ್ಯ” – ಅಧ್ಯಾಯದ ಪಾರಾಯಣ.
ಚಳ್ಳಕೆರೆ ನ.02

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂಸೇವಕಿ ಕುಮಾರಿ ಪುಷ್ಪಲತಾ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-2 ರ ಪಾರಾಯಣ ಮಾಡುತ್ತ “ವರವಾದ ವೈಧವ್ಯ” ಎಂಬ ಅಧ್ಯಾಯವನ್ನು ವಾಚಿಸಿ ಅರ್ಥ ವಿವರಣೆ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ವೇದ ಮಂತ್ರಗಳು ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಠಣ ನಡೆಯಿತು.

ಸತ್ಸಂಗ ಸಭೆಯಲ್ಲಿ ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ವೆಂಕಟಲಕ್ಷ್ಮೀ, ಮಂಜುಳಾ ಉಮೇಶ್, ಜಿ.ಯಶೋಧಾ ಪ್ರಕಾಶ್, ಯತೀಶ್ ಎಂ ಸಿದ್ದಾಪುರ, ಚೇತನ್ ಸೇರಿದಂತೆ ಸದ್ಭಕ್ತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

