ಶರಣು ಚಟ್ಟಿ ಯವರಿಗೆ ತಾಲೂಕ ಆಡಳಿತ ದಿಂದ – ರಾಜ್ಯೋತ್ಸವ ಪ್ರಶಸ್ತಿ.
ಗುಂದಗಿ ನ.03

ಸಿಂದಗಿ ತಾಲೂಕು ಆಡಳಿತದಿಂದ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಪಟ್ಟಣದ ಗುಂದಗಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೋಲಗೇರಿ ಕ್ಲಸ್ಟರ್ ಸಿ.ಆರ್.ಪಿ, ಹಾಗೂ ವ್ಯಂಗ್ಯ ಚಿತ್ರಕಾರ, ಸಾಹಿತಿ ಶರಣು ಚಟ್ಟಿ ಅವರಿಗೆ ಸಾಹಿತ್ಯ ಕಲಾ ಕ್ಷೇತ್ರ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಹಶಿಲ್ದಾರರಾದ ಕರೆಪ್ಪ ಬೆಳ್ಳಿ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮು ಅಗ್ನಿ, ಕ್ಷೇತ್ರ ಶಿಕ್ಷಣಾಧಿಕಾಗಳಾದ ಮಹಾಂತೇಶ ಯಡ್ರಾಮಿ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ.ಸಿ ಮಯೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಅಕ್ಷರ ದಾಸೋಹ ಅಧಿಕಾರಿ ಅರವಿಂದ ಡೋಣೂರ, ಕನ್ನಡಪರ ಹೋರಾಟಗಾರ ಸಂತೋಷ ಮಣಿಗಿರಿ, ಉಪನ್ಯಾಸಕ ಭಾಗೇಶ ಮುರಡಿ, ಪ್ರೊ.ರವಿ ಗೋಲಾ, ಶಿಕ್ಷಕ ಸಾಹಿತಿಗಳಾದ ಬಸವರಾಜ ಅಗಸರ, ಎಂ.ಆರ್ ಡೋಣಿ ಯುವ ಮುಖಂಡರಾದ ಮಡಿವಾಳ ನಾಯ್ಕೋಡಿ, ನಾಗೇಶ್ ತಳವಾರ, ಶಿಕ್ಷಕರಾದ ಭೈರವ ಬನ್ನೆ, ಸೈಪನ್ ನದಾಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

