ದೆಹಲಿಯ ಸ್ಟಾರ್ಟ್ ಅಪ್ ಶಿಕ್ಷಾ ಫೌಂಡೇಶನ್ ನಿಂದ ಮಲ್ಲಿಕಾರ್ಜುನ.ಬಿ ಸುಗೂರ.ಎನ್ – ಗೇ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.
ಕಲಬುರ್ಗಿ ನ.04

ಹಡಪದ ಅಪ್ಪಣ್ಣ ಕ್ಷೌರಿಕ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಮಲ್ಲಿಕಾರ್ಜುನ.ಬಿ ಹಡಪದ ಸುಗೂರ ಎನ್ ಅವರ. ಕನ್ನಡ ನಾಡು ನುಡಿ ನೆಲ ಜಲ ಭಾಷೆ ಮತ್ತು ಜನಪರ ಹೋರಾಟಗಳನ್ನು ಗುರುತಿಸಿ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಅವರ ಸಮಾಜ ಸೇವೆಯನ್ನು ಕಂಡು ಜೀ 20 MSME (ಮೈಕ್ರೋ ಸ್ಮಾಲ್ ಮತ್ತು ಮೀಡಿಯಂ ಎಂಟರ್ಪ್ರೈಸಸ್ ಅಂತಾರಾಷ್ಟ್ರೀಯ ಸಂಸ್ಥೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು.
ಸಂತೋಷದ ಸಂಗತಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಪದವಿ ಗಿಟ್ಟಿಸಿ ಕೊಳ್ಳುವುದು ಸಾದಾರಣ ಮಾತಲ್ಲ.ಸಾಮಾಜಿಕವಾಗಿ ಇವರು ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ದೆಹಲಿಯ ಸ್ಟಾರ್ಟ್ಅಪ್ ಶಿಕ್ಷಾ ಫೌಂಡೇಶನ್, ರವರು ಇವರಿಗೆ ಗೌರವ ಡಾಕ್ಟರೇಟನ್ನು ನೀಡಿದ್ದು, ದಿನಾಂಕ 04-11-2025 ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪದವಿ ಪ್ರಧಾನ ಮಾಡಲಿದ್ದಾರೆ.

ಮೂಲತ ಇವರು ಕಲಬುರಗಿ ಜಿಲ್ಲೆ, ಚಿತ್ತಾಪುರ ತಾಲೂಕು ಸುಗೂರ ಎನ್ ಗ್ರಾಮದಲ್ಲಿ ವಾಸವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸಂಘವನ್ನು ಕಟ್ಟಿಕೊಂಡು ಕಲಬುರಗಿ ಜಿಲ್ಲಾ ಎಲ್ಲಾ ತಾಲೂಕುಗಳಲ್ಲಿ ಅಂಗವಿಕಲರಿಗೆ (ವಿಕಲ ಚೇತನರಿಗೆ) ನಿರ್ಗತಿಕರಿಗೆ. ಅನಾಥ ಶಾಲಾ ಮಕ್ಕಳಿಗೆ. ಬುದ್ದಿ ಮಾಂಧ್ಯರಿಗೆ. ಅನಾಥ ಆಶ್ರಯ ಹಿರಿಯ ವೃದ್ದರಿಗೆ. ನಿರ್ಗತಿಕರ ಕೇಂದ್ರದಲ್ಲಿ ಇರುವ ನಿರಾಶ್ರಿತರಿಗೆ. ಸಾಧು ಸಂತರಿಗೆ, ಹಾಗೂ ಹಿರಿಯ ನಾಗರಿಕರಿಗೆ ಬಡವರಿಗೆ ಸ್ಕೂಲ್ ಮಕ್ಕಳಿಗೆ ತಮ್ಮಿಂದ ಆದಂತಹ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಒಟ್ಟು ಇಲ್ಲಿಯವರೆಗೆ ೧೬೫೦ಕ್ಕೊ ಹೆಚ್ಚು ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದರು.
ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಬಡ ಕುಟುಂಬದಲ್ಲಿ ಜನಿಸಿದ್ದು ಇವರ ಸೇವೆಗೆ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರ ಮುಡಿಗೇರಿವೆ. ಇವರು ಜೂನ್ 6. 1993 ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ.ಎನ್ ಗ್ರಾಮದಲ್ಲಿ ಜನಿಸಿದರು. ತಮ್ಮ ವಿಶಿಷ್ಟ ಕ್ಷೌರಿಕ ವೃತ್ತಿಯ ಸೇವೆ. ಸಾಹಿತ್ಯ, ಸಮಾಜ ಸೇವೆ ಮತ್ತು ಪತ್ರಿಕಾ ವರದಿಗಾರರಾಗಿ ಗುರುತಿಸಿ ಕೊಂಡಿದ್ದಾರೆ. ಆರೋಗ್ಯ ಶಿಬಿರ, ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಸಾಧನೆ ಗೈದಿದ್ದಾರೆ.
ಇವರು ಜೀವನದಲ್ಲಿ ತುಂಬಾ ಕಷ್ಟಪಟ್ಟು ತಮ್ಮ ಕಷ್ಟವನ್ನು ಪಕ್ಕಕ್ಕಿಟ್ಟು ಬೇರೆಯವರ ಕಷ್ಟವನ್ನು ಅರಿತು ಈ ಒಂದು ಸಮಾಜ ಸೇವೆಯಲ್ಲಿ ತೊಡಗಿ ಬೇರೆಯವರಿಗೆ ಸ್ಪೂರ್ತಿಯಾಗಿ ಜೀವನವನ್ನು ಸಾಗಿಸುತ್ತಿದ್ದಾರೆ ಇಂತಹ ವ್ಯಕ್ತಿಗಳನ್ನು ಗುರುತಿಸುತ್ತಾ ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಈ ಒಂದು ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.

