ಎ.ಪಿ.ಎಮ್.ಸಿ ಅಧ್ಯಕ್ಷರಾಗಿ ಸಂಗಮೇಶ ಛಾಯಾಗೋಳ – ಅವಿರೋಧ ಆಯ್ಕೆ.
ಸಿಂದಗಿ ನ.05

ಅಖಂಡ ಸಿಂದಗಿ ಹಾಗೂ ದೇವರ ಹಿಪ್ಪರಗಿ ಆಲಮೇಲ ತಾಲೂಕುಗಳಿಗೆ ಸಂಬಂಧಿಸಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಸಿಂದಗಿಯಲ್ಲಿ ಎ.ಪಿ.ಎಮ್.ಸಿ 12 ಜನ ನಿರ್ದೇಶಕರು ಇದ್ದಾರೆ. ಇಂದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಅಧ್ಯಕ್ಷರ ಸ್ಥಾನಕ್ಕೆ ಸಂಗಮೇಶ ಛಾಯೊಗೋಳ ನಾಮಪತ್ರ ಸಲ್ಲಿಸಿದರು.

ಉಪಾಧ್ಯಕ್ಷರ ಸ್ಥಾನಕ್ಕೆ ಬಸನಗೌಡ ಪಾಟೀಲ ಅವರು ನಾಮಪತ್ರ ಸಲ್ಲಿಸಿದರು. ಆದರೆ ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಕಾರಣಕ್ಕೆ ಅಧ್ಯಕ್ಷರು ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ ಯಾದರು. ಅಧ್ಯಕ್ಷರಾಗಿ ಸಂಗಮೇಶ ಛಾಯೊಗೋಳ ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಬಸನಗೌಡ ಪಾಟೀಲ ಗುಂದಗಿಯವರು ಆಯ್ಕೆ ಯಾದರು. ಹಾಗೂ ಅಧ್ಯಕ್ಷರಾದ ಸಂಗಮೇಶ ಛಾಯೊಗೋಳ ಅವರು ಕೃಷಿಯ ಹಾಗೂ ರೈತರು ಬಹಳ ಅನುಭವ ಇದ್ದವರು ಹಾಗೂ ಕೋರವಾರ ಪಿ.ಕೆ.ಪಿ.ಎಸ್ ನ ಸತತವಾಗಿ ಮೂರು ಸಲ ಅಧ್ಯಕ್ಷರು ಆಗಿದ್ದಾರೆ.

ಸಿಂದಗಿ ಎ.ಪಿ.ಎಮ್.ಸಿ ಇನ್ನೂ ಮುಂದೆ ಬಹಳ ಸುಧಾರಣೆ ಮಾಡುತ್ತಾನೆ ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳುತ್ತೆನೆ ಎಂದು ಅಧ್ಯಕ್ಷರು ಹೇಳಿದರು. ಈ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರು ಹಾಗೂ ರೈತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ.ಹಿಪ್ಪರಗಿ

