“ಬಾಳಯಾತ್ರೆ”…..

ಸರ್ವರಲಿ ಬೆರಿ ಮನವ ಅರಿ
ಎಲ್ಲರಂತಾಗಬೇಡಿ ನೀನಾಗಿ ಮಾಗಿ
ಜೀವನದಲಿ ಬಾಗಿ ಬಾಳ ಯಾತ್ರೆಯಲಿ
ಸುರಕ್ಷಿತವಾಗಿ ಸಾಗಿ ಸಲಹೆಗಳನ್ನು ಕೇಳಿ
ನಿನ್ನ ಅರಿವಿನಲಿ ನಡಿ
ಯೊಗ್ಯತೆಗೆ ತಕ್ಕದು ಪಡಿ
ಅವರಿವರು ಮೆಚ್ಚಲೆನ್ನದಿರಿ
ನಿನ್ನಾತ್ಮವು ಒಪ್ಪುತಿರಲಿ
ಸಿರಿ ಗರ ಇದ್ದವರ ಆಹ್ವಾನಿಸದಿರಿ
ಬಡವನಾದರೇನು ನಿನಗಾಸರೆ
ಕೇಡ ಬಯಸದಿರುವುದೇ ನಿನ್ನ
ನಿಜ ಸಿರಿ ಗರಿ
ಎದುರಿಗೆ ನಿನ್ನ ಮೆಚ್ಚುವವ
ಹಿಂದುಗಡೆ ತೆಗಳುವವ ನಿಜ ವೈರಿ
ನಿನಗೆ ನೀನೇ ಮಾದರಿಯಾಗಿ
ಬಾಳಯಾತ್ರೆ ಜಯಸಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

