ಮಹಾತ್ಮರ ಜೀವನ ಸಂದೇಶಗಳು ನಮ್ಮ ಬಾಳಿಗೆ ದಾರಿ ದೀಪ – ಶ್ರೀಮತಿ ಎಚ್.ಲಕ್ಷ್ಮೀದೇವಮ್ಮ ಹೇಳಿಕೆ.
ಚಳ್ಳಕೆರೆ ನ.06

ಮಹಾತ್ಮರ ಜೀವನ ಮತ್ತು ಅವರು ನೀಡಿರುವ ಸಂದೇಶಗಳು ನಮ್ಮ ನಿತ್ಯ ಬಾಳಿಗೆ ದಾರಿ ದೀಪವಾಗಿರುತ್ತವೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ಸದ್ಭಕ್ತರಾದ ಶ್ರೀಮತಿ ಸರಸ್ವತಿ ನಾಗರಾಜ್ ಅವರ ನಿವಾಸದಲ್ಲಿ ಶ್ರೀರಾಮಕೃಷ್ಣರ ನೇರ ಸಂನ್ಯಾಸಿ ಶಿಷ್ಯರಾದ “ಸ್ವಾಮಿ ವಿಜ್ಞಾನಾನಂದಜೀ” ಮತ್ತು “ಸ್ವಾಮಿ ಸುಬೋಧಾನಂದಜೀ” ಮಹಾರಾಜ್ ಅವರ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಇಬ್ಬರು ಸಂನ್ಯಾಸಿಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ,ಶ್ರೀಮತಿ ಎಂ ಗೀತಾ ನಾಗರಾಜ್, ರತ್ನಮ್ಮ ಮತ್ತು ಕುಮಾರಿ ವೈಷ್ಣವಿ ರಾಜ್ ಅವರಿಂದ ವಿಶೇಷ ಭಜನೆ ನಡೆದರೆ ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು.
ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಶ್ರೀಮತಿ ಸರಸ್ವತಿ ನಾಗರಾಜ್, ಗೀತಾ ವೆಂಕಟೇಶ್, ಬಿ.ಟಿ.ಗಂಗಾಂಬಿಕೆ, ಗಿರಿಜಾಮ್ಮ ,ಸೃಜನ್ ರಾಜ್,ಗೀತಾ ಷಣ್ಮುಖಪ್ಪ,ತಳುಕಿನ ತೊಯಜಾಕ್ಷಿ, ಸರ್ವಮಂಗಳ ಶಿವಣ್ಣ , ಗೀತಾ ಸುಂದರೇಶ್ ದೀಕ್ಷಿತ್,ಪಂಕಜ ಚೆನ್ನಪ್ಪ , ಸೌಮ್ಯ ಪ್ರಸಾದ್ , ಸರಸ್ವತಿ , ಜಯಮ್ಮ ,ಅನ್ವಿಕಾ ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

