ದಲಿತರಿಗೆ ಸಿ.ಎಂ ಮಾಡಿಲ್ಲ. ಮಾಡೋದು ಇಲ್ಲಾ ಭೀಮ್ ಆರ್ಮಿ – ಜಿಲ್ಲಾ ಅಧ್ಯಕ್ಷ ಡಿ.ಕೆ ದ್ಯಾವಪ್ಪ.
ದೇವರ ಹಿಪ್ಪರಗಿ ನ.06

ದಲಿತರಿಗೆ ಸಿ.ಎಂ ಮಾಡುವ ಪ್ರಶ್ನೆ ಎದ್ದಾಗ ಅಧಿಕಾರದಲ್ಲಿ ಇಲ್ಲ ಅಂತ ಹೇಳುತ್ತಾರೆ ಈ ಹಿಂದೆ ಬಿಜೆಪಿ ಅಧಿಕಾದಲ್ಲಿ ಇದ್ದಾಗ ಮೇಲೆ ಜಾತಿಯವರಿಗೆ ನಾಲ್ಕು ಮಂದಿಗೆ ಸಿ.ಎಂ ಮಾಡಿದರು ಆದರೆ ಅವಾಗ ದಲಿತರಿಗೆ ಸಿ.ಎಂ ಮಾಡ ಬೇಕಾಗಿತು ಬರೀ ರಾಜಕೀಯ ಪಕ್ಷಗಳು ನಾಟಕ ಬೇರೆ ರಾಜ್ಯಗಳಲ್ಲಿ ದಲಿತರಿಗೆ ಸಿ.ಎಂ ಮಾಡಿದ್ದಾರೆ ಆದರೆ ಕರ್ನಾಟಕದಲ್ಲಿ ಏಕೆ ಮಾಡಿಲ್ಲಾ…?ಅಧಿಕಾರ ಇರುವ ಪಕ್ಷದವರು ವಿರೋಧ ಪಕ್ಷದವರು ಮಾಡಲಿ ಅಂತಾ ಹೇಳುತ್ತಾರೆ. ವಿರೋಧ ಪಕ್ಷದವರು ಅಧಿಕಾರದಲ್ಲಿರುವ ಪಕ್ಷದವರು ಮಾಡಲಿ ಅಂತಾ ಹೇಳುತ್ತಾರೆ. ದಲಿತ ಸಿ.ಎಂ ಅನ್ನುವುದು ರಾಜಕೀಯ ಲಾಭ ಮತ್ತು ಚುನಾವಣೆಗೆ ಸೀಮಿತ ಮಾಡುವ ಕುತಂತ್ರವಾಗಿದೆ ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ವಿಜಯಪುರ ಜಿಲ್ಲಾಧ್ಯಕ್ಷರಾದ ಡಿ.ಕೆ.ದ್ಯಾವಪ್ಪ ದೊಡ್ಡಮನಿ ಆರೋಪಿಸಿದ್ದಾರೆ, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಾಕತ್ತಿದ್ದರೆ ನಿಮ್ಮ ನಿಮ್ಮ ಪಕ್ಷಗಳಲ್ಲಿನ ದಲಿತರನ್ನು ಸಿ.ಎಂ ಮಾಡುವ ಕೆಲಸ ಮಾಡಿ. ಕಾಂಗ್ರೆಸ್ ಬಗ್ಗೆ ಮಾತನಾಡುವ ಬಿಜೆಪಿ ತಮ್ಮ ಪಕ್ಷದಲ್ಲೇ ದಲಿತರನ್ನು ಸಿ.ಎಂ ಮಾಡಲಿ ಎಂದಿರುವ ಅವರು, ಬಿಜೆಪಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಮುಂದಿನ ದಲಿತ ಸಿ.ಎಂ ಘೋಷಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿಯನ್ನು ದಲಿತರು ಅರ್ಥ ಮಾಡಿ ಕೊಂಡಿದ್ದಾರೆ. ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಮತ್ತು ಸಾಮಾಜಿಕ ನ್ಯಾಯದ ಮಾತನಾಡುವ ಪಕ್ಷಗಳು ದಲಿತರಿಗೆ ಮೋಸ ಮಾಡುತ್ತಾ ಬಂದಿವೆ. ಕರ್ನಾಟಕದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಗಳು ದಲಿತರಿಗೆ ಸಿ.ಎಂ ಮಾಡಿಲ್ಲ ಮಾಡೋದು ಇಲ್ಲ ಎಂದಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ.ಹಿಪ್ಪರಗಿ

