ಕೃಷ್ಣರೂಪಿ ರಾಮಕೃಷ್ಣರನ್ನು ಕಂಡವಳು ಗೋಪಾಲೇರ್ ಮಾ – ಶ್ರೀಮತಿ ಎಂ.ಗೀತಾ ನಾಗರಾಜ್.
ಚಳ್ಳಕೆರೆ ನ.07

ಶ್ರೀರಾಮಕೃಷ್ಣ ಪರಮಹಂಸರಲ್ಲಿ ಬಾಲಕೃಷ್ಣನನ್ನು ಕಂಡು ಸಾಕ್ಷಾತ್ಕಾರಿಸಿಕೊಂಡವಳು ಗೋಪಾಲೇರ್ ಮಾ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್ ಅಭಿಮತ ವ್ಯಕ್ತಪಡಿಸಿದರು.
ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಕಾರ್ತಿಕ ಹುಣ್ಣಿಮೆ” ಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು “ಯುಗಾವತಾರ ಶ್ರೀರಾಮಕೃಷ್ಣ ಭಾಗ-೨” ರ ಗ್ರಂಥ ಪಾರಾಯಣ ಮಾಡುತ್ತ “ಕೃಷ್ಣರೂಪಿ ರಾಮಕೃಷ್ಣ”ಎಂಬ ಅಧ್ಯಾಯವನ್ನು ಓದಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ವೇದ ಮಂತ್ರಗಳು ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಠಣ, ವಿಶೇಷ ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ, ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಶ್ರೀಮತಿ ಕವಿತಾ ಗುರುಮೂರ್ತಿ, ಮಂಜುಳಾ ಉಮೇಶ್,ಅಂಬುಜಾ ಶಾಂತಕುಮಾರ್, ವೆಂಕಟಲಕ್ಷ್ಮೀ, ಸುಧಾಮಣಿ, ನಾಗರಾಜ್, ಯತೀಶ್ ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್, ಚೇತನ್, ಪುಷ್ಪಲತಾ, ಡಾ.ಭೂಮಿಕಾ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

