“ಕನ್ನಡ ಸವಿ ಸಿರಿ ನುಡಿ”…..

ಸರಳ ಶುದ್ಧತೆಯ ಭಾವ ನುಡಿಯು
ಕನ್ನಡ ಅಕ್ಷರ ಬರವಣೆಗೆ ಚಂದವು
ಕಲಿಕೆಗೆ ಜೇನ ಸಿಹಿ ನುಡಿ ಕವಿರಾಜ ಮಾರ್ಗವು
ಕರುನಾಡ ರಾಜ ಮಹಾರಾಜರ ನುಡಿಯು
ಸರ್ವಜ್ಞ ಬಸವೇಶ್ವರ ದಾಸರ ಶರಣ ಪ್ರಮಥರ
ವಚನಗಳು
ಜನಪದ ಸಾಹಿತ್ಯ ಆಚಾರ ವಿಚಾರ ಅಮೖತ
ಸವಿ ನುಡಿಯು
ಕುವೇಂಪು ದ ರಾ ಬೇಂದ್ರೆ ಮಾಸ್ತಿ ಕಾರಂತರು
ರಾಷ್ಟ್ರ ಕವಿಗಳ ಮೇರು ಕೃತಿ ಸಿಹಿ ಹೂರಣವು
ಬದಾಮಿ ಐಹೊಳೆ ಪಟ್ಟದಕಲ್ಲ್ ಬೇಲೂರು
ಹಂಪೆ ಹಳೇಬೀಡು ವೈಭವ ನುಡಿ ಸಿರಿಯು
ವಿಜಯ ನಗರ ಮೈಸೂರ ಅರಸರ ಕರುನಾಡ
ಸಿರಿ ನುಡಿಯು
ಪಂಪ ರನ್ನ ಜನ್ನರ ಸವಿ ನುಡಿ ಚಂದದ ನಾಡು
ಕಲಿಕೆಯು ಸರಳ ನುಡಿಯು ಮಧುರಮಯವು
ಕನ್ನಡ ಕಲಿಯುತ ನುಡಿಯುತ ಜೀವನ
ಹರುಷದಿ ಸಾಗುವದು
ನಟ ಕಲಾವಿದರ ಕಲಾರಸಿಕರ ಸಿಹಿ ಸಿರಿ
ನುಡಿಯು
ಭಾರತ ಮಾತೆಯ ಮಮತೆಯ ಜೋಗುಳ
ಲಾಲಿ ಹಾಡು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಘಂಟಾ
ನಾದವು
ಕನ್ನಡ ನುಡಿ ವಿಶ್ವದೆಲ್ಲೆಡೆ ಅನವರತ
ಪ್ರಜ್ವಲಿಸುವುದು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.

