ಸರ್ಕಾರದ ಸೌಲಭ್ಯಗಳ – ಸದುಪಯೋಗಕ್ಕೆ ಕರೆ.
ಕಲಬುರಗಿ ನ.08

ಇಡೀ ಕರ್ನಾಟಕ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆಗೆ ಹಾಗೂ ಅನೇಕ ಕಾಯಕ ಸಮಾಜಕ್ಕೆ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಣ್ಣ ಸಣ್ಣ ಕಾಯಕ ಸಮಾಜಕ್ಕೆ ಮತ್ತು ಕ್ಷೌರಿಕ ವೃತ್ತಿಯನ್ನು ಮಾಡುಕ ಕಾಯಕ ಸಮಾಜಕ್ಕೆ ಈ ಸಣ್ಣ ಕಾಯಕ ಸಮಾಜವು ಆರ್ಥಿಕವಾಗಿ ಹಿಂದುಳಿದಿದೆ ಈ ಹಿಂದುಳಿದ ವರ್ಗಗಳ ಕಾಯಕ ಸಮಾಜವನ್ನು ಅಭಿವೃದ್ಧಿಯ ಕಡೆಗೆ ಗಮನ ಸೆಳೆಯುವ ಉದ್ದೇಶದಿಂದ ಈ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಅನೇಕ ಕಾಯಕ ಸಮುದಾಯದ ಜೊತೆಯಲ್ಲಿ ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜಕ್ಕೆ 1 ಲಕ್ಷ ಅಥವಾ 2 ಲಕ್ಷ ರೂ, ಲೋನ್ ರೂಪದಲ್ಲಿ ಕೊಡುವುದರ ಮೂಲಕ ಸಹಕಾರ ಮಾಡುತ್ತಿದೆ. ಆದರೆ ಈ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಸಮಾಜದ ಬಂಧುಗಳು ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕಾ ಜಂಟಿ ನಿರ್ದೇಶನಾಲಯ ತರಬೇತಿ ಕೇಂದ್ರದ ಯೋಜನೆಯ ಅಡಿಯಲ್ಲಿ ಟ್ರೇನಿಂಗ್ ಪಡೆಯಲಾಗಿದೆ. ಹಾಗೂ ಅಸಂಘಟಿತ ವಲಯದ ಬರುವ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಸಮಾಜಕ್ಕೆ ಜಿಲ್ಲಾ ಕಾರ್ಮಿಕ ಇಲಾಖೆಯ ಆಫೀಸ್ ನ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಈ ಯೋಜನೆಯ ಲಾಭ ಸಣ್ಣ ಸಣ್ಣ ಕಾಯಕ ಸಮಾಜಕ್ಕೆ ದೂರೆಯಲಿ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವ ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜಕ್ಕೆ ಅನ್ಯಾಯದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು. ಸಮಾಜವು ಅನೇಕ ಹೋರಾಟದ ಮೂಲಕ ಕೇಂದ್ರ ಸರ್ಕಾರವು ಸಂವಿಧಾನ ಬದ್ಧವಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದು. ಈ ಅವಕಾಶಗಳನ್ನು ನಮ್ಮ ಇಡೀ ದೇಶದ ಮತ್ತು ಕರ್ನಾಟಕದ ರಾಜ್ಯದ ಹಾಗೂ ಕಲಬುರಗಿ ಜಿಲ್ಲೆಯ ಒಳಪಡುವ ಎಲ್ಲಾ ತಾಲೂಕಿನ ಗ್ರಾಮೀಣ ಭಾಗದ ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕ ಸಮಾಜದ ಬಂಧುಗಳು ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಲೋನ್ ಗೇ ಅರ್ಜಿ ಸಲ್ಲಿಸಿ , 7ದಿನಗಳ ವರೆಗೂ ಟ್ರೇನಿಂಗ್ ಮುಗಿಸಿ ಸರ್ಟಿಫಿಕೇಟ್ ಪಡೆದುಕೊಂಡರು ಮತ್ತು ಬ್ಯಾಂಕ್ ನಲ್ಲಿ ಸಹ ಕೆಲವರು ಲೋನ್ ಪಡೆದರು, ಮತ್ತು ಇನ್ನೊ ಕೆಲವರು ಲೋನ್ ತೆಗೆದುಕೊಂಡಿಲ್ಲಾ. ಹೀಗಾದರೆ ಸಮುದಾಯದ ಜನತೆ ಪ್ರಗತಿಯ ಕಡೆಗೆ ಮುನ್ನುಗ್ಗಿ ಪ್ರಾದೇಶಿಕ ಅಸಮತೋಲನೆಯನ್ನು ನಿವಾರಿಸುವುದು ಹೇಗೆ ನಮ್ಮ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುಬೇಕು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ತಿಳಿಸಿದರು. ಕಲಬುರಗಿ ನಗರದ ಮತ್ತು ಕಲಬುರಗಿ ಜಿಲ್ಲೆಯ ಒಳಪಡುವ ಎಲ್ಲಾ ತಾಲ್ಲೂಕು ಮತ್ತು ಹೋಬಳಿ ವಲಯದಲ್ಲಿ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಪ್ರತಿಯೊಬ್ಬ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಸಮಾಜಕ್ಕೆ ಪ್ರತಿಯೊಂದು ರೇಷನ್ ಕಾಡ್೯ ಒಬ್ಬರಂತೆ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ರೇಷನ್ ಕಾಡ್೯ ಕುಟುಂಬಕ್ಕೆ ಒಬ್ಬರಂತೆ ಲೋನ್ ಆಗಿತ್ತಿದೆ. ಒಳ್ಳೆಯದು ಆದರೆ ಈ ಲೋನ್ ಪಡೆಯಬೇಕಾದರೆ ಆನ್ ಲೈನ್ ಅರ್ಜಿ ಸಲ್ಲಿಸಿ ನಂತರ ೭ದಿನಗಳ ವರೆಗೂ ಟ್ರೇನಿಂಗ್ ಮುಗಿಸಿ ಸರ್ಟಿಫಿಕೇಟ್ ಪಡೆದು, ಸಂಬಂಧ ಪಟ್ಟ ಬ್ಯಾಂಕ್ ಗೇ 500 ರೂ ಇರುವ 5 ಸ್ಟಾಂಪ್ ಪೇಪರ್ . ತೆಗೆದುಕೊಂಡು ಮತ್ತು ಕ್ಷೌರಿಕ ವೃತ್ತಿಯನ್ನು ಮಾಡುವ ಅಂಗಡಿಯ ಪರಿಶೀಲನೆ, ಮಾಡಿ ಆಧಾರ ಕಾಡ್೯, ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ, ಮತ್ತು ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವ ಕ್ಷೌರಿಕ ವೃತ್ತಿಯ ಸ್ಮಾಟ್೯ಕಾಡ್೯ , ಟ್ರೇನಿಂಗ್ ಸರ್ಟಿಫಿಕೇಟ್, ಎಲ್ಲಾ ದಾಖಲೆಯನ್ನು ನೀಡಿದರೂ ಸಹ ಗ್ರಾಮೀಣ ಭಾಗದಲ್ಲಿ 1 ಲಕ್ಷ ರೊ ಅಥವಾ 2 ಲಕ್ಷ ರೂ. ಲೋನ್ ಬ್ಯಾಂಕ್ ಅಧಿಕಾರಿಗಳು ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದರು , ಸಹ ಬ್ಯಾಂಕ್ ನ ಅಧಿಕಾರಿಗಳು ಬರಿ ಗ್ರಾಮೀಣ ಭಾಗದಲ್ಲಿ ಐವತ್ತು ಸಾವಿರ ರೂ, ಲೋನ್ ನೀಡುತ್ತಿದ್ದಾರೆ. ಹೀಗಾದರೇ ಈ ಯೋಜನೆ ಲಾಭ ಬಡವರಿಗೆ ಕಷ್ಟದ ಕೆಲಸ ವಾಗಿದೆ. ಹಾಗೆಯೇ ಈ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ವೃತ್ತಿಯನ್ನು ಮಾಡುವ ಕಾಯಕ ಸಮಾಜದ ಬಂಧುಗಳಿಗೆ 1 ನೇ ಹಂತದಲ್ಲಿ , ಮತ್ತು 2 ನೇ ಹಂತದಲ್ಲಿ ಮತ್ತು ಹಂತ ಹಂತವಾಗಿ 7 ದಿನದ ವರೆಗೆ ಟ್ರೇನಿಂಗ್ ಮುಗಿದ ನಂತರ 7 ದಿನದ ಭತ್ಯೆಯ ಹಣ ಜಮಾವಣೆ ಆಗಿದೆ. ಆದರೆ ಟ್ರೇನಿಂಗ್ ಪಡೆದ ಕ್ಷೌರಿಕ ಸಮಾಜದ ಕಾಯಕ ಬಂಧುಗಳಿಗೆ 15 ಸಾವಿರ ರೂ ಟೂಲ್ ಕಿಟ್ ಸಾಮಾನುಗಳು ಬರುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಅದು ಬಂದಿಲ್ಲಾ . ಮತ್ತು ಟೂಲ್ ಕಿಟ್ ಪಡೆಯದೇ ಇದ್ದರೇ ನಿಮ್ಮ ಅಕೌಂಟ್ ಖಾತೆ ಗೇ 15.000 ಸಾವಿರ ರೂ ಜಮಾವಣೆ ಮಾಡಲಾಗುತ್ತದೆ ಎಂದು ಹೇಳಿದರು. ಅಧಿಕಾರಿಗಳು ಈ ಮಾತು ಸುಳ್ಳಾಗಿದೆ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳ ಅಕೌಂಟ್ ಖಾತೆ ಗೆ ನಯಾ ಪೈಸೆ ಹಣ ಜಮಾವಣೆ ಆಗಿಲ್ಲ. ? ಹೀಗಾದರೇ ಕ್ಷೌರಿಕ ವೃತ್ತಿಯ ಟೂಲ್ ಕಿಟ್ ಸಾಮಾನುಗಳ ಹಣ ಎಲ್ಲಿ ಹೋಯಿತು, ಈ ಪಿ.ಎಮ್ ವಿಶ್ವಕರ್ಮ ಯೋಜನೆಯ ಸೌಲಭ್ಯ ಟೂಲ್ ಕಿಟ್ ಹಣ ಕೇಂದ್ರ ಸರ್ಕಾರವೇ ಬ್ಯಾಂಕ್ ಮೂಲಕ ಹಣ ನೀಡಿ ಟೂಲ್ ಕಿಟ್ ಹಣ ಸಹ ನೀಡಿದೆ ಈ ಹಣ ಏಕೆ ಕ್ಷೌರಿಕ ಬಂಧುಗಳ ಅಕೌಂಟ್ ಖಾತೆ ಗೇ ಜಮಾ ವಣೆ ಮಾಡಿಲ್ಲಾ, ಈ ಹಣ ಎಲ್ಲಿ ಹೋಯಿತು ಎಂಬ ಆತಂಕ ಅನೇಕ ಸಣ್ಣ ಸಣ್ಣ ಕಾಯಕ ಸಮಾಜದ ಬಂಧುಗಳು ತಮ್ಮ ನೋವಿನಿಂದ ಹೊರ ಹಾಕಿದ್ದಾರೆ, ನಮ್ಮ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಸಮಾಜಕ್ಕೆ ಅನ್ಯಾಯ ವಾಗದಿರಲಿ. ಅಧಿಕಾರಿಗಳು ಈ ಯೋಜನೆ ಬಗ್ಗೆ ಹೆಚ್ಚು ಗಮನ ಹರಿಸಿ ಮತ್ತು ಜಿಲ್ಲಾಧಿಕಾರಿಗಳು ಈ ಯೋಜನೆಯ ಟೂಲ್ ಕಿಟ್ ಹಣ ಏಕೆ ಬಂದಿಲ್ಲಾ, ಎಂದು ಅಧಿಕಾರಿಗಳಿಗೆ ಕೇಳಿದರೆ ಯಾರು ಈ ವಿಷಯದ ಬಗ್ಗೆ ಮಾಹಿತಿ ನೀಡುತ್ತಿಲ್ಲಾ.? ಈ ಸಣ್ಣ ಸಣ್ಣ ಕಾಯಕ ಸಮಾಜಕ್ಕೆ ಸೌಲಭ್ಯಗಳನ್ನು ಒದಗಿಸಿ ಕೊಡುವುದರ ಮೂಲಕ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಸಮಾಜದ ಸಮಸ್ಯೆಗಳು ಮತ್ತು ಸವಾಲು” ಗಳು ಎಂಬ ವಿಷಯದ ಮೇಲೆ ವಿಶೇಷವಾಗಿ ಎಲ್ಲಾ ಅಧಿಕಾರಿಗಳಿಗೆ ಒತ್ತಡ ಹಾಕುವ ಮೂಲಕ ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ, ಬಡ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಸಮಾಜದ ಜನರಿಗೆ ಅಗತ್ಯ ಯೋಜನೆಗಳನ್ನ ರೂಪಿಸಿ ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದಕಡೆ ಸಾಗುವುದು ಪ್ರಸ್ತುತ ತುಂಬಾ ಅಗತ್ಯ ವಾಗಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅಬಿಪ್ರಾಯ ಪಟ್ಟರು. ಈ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಬರುವ ಹಡಪದ ಅಪ್ಪಣ್ಣ ಸಮಾಜದ ಕಾಯಕ ಬಂಧುಗಳಿಗೆ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ ಗಳು ಮತ್ತು ಕೈಗಾರಿಕಾ ಜಂಟಿ ನಿರ್ದೇಶನಾಲಯ ಯೋಜನೆ ಕೇಂದ್ರ ಮಂಡಳಿ, ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಯಾವುದೇ ಸಣ್ಣ ಸಣ್ಣ ಸಮಾಜಕ್ಕೆ ಅನ್ಯಾಯ ವಾಗದಂತೆ ಲೋನ್ ನೀಡಬೇಕು, ಮತ್ತು ಆನ್ ಲೈನ್ ನಲ್ಲಿ ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳಿಗೆ ಇನ್ನೊ ಟ್ರೇನಿಂಗ್ ವಿಳಂಬ ಮಾಡಲಾಗಿದೆ, ಈ ವಿಳಂಬ ಮಾಡದೇ ಆದಷ್ಟು ಬೇಗ ಹಂತ ಹಂತವಾಗಿ ಅರ್ಜಿ ಸಲ್ಲಿಸಿದ ಕ್ಷೌರಿಕ ಸಮಾಜದ ಬಂಧುಗಳಿಗೆ ಟ್ರೇನಿಂಗ್ ನೀಡಿ , ಅವರಿಗೆ ಭ್ಯಾಂಕ್ ನಲ್ಲಿ ಯಾವುದೇ ರೀತಿಯ ದುಂದು ವೆಚ್ಚ ಮಾಡದೇ ಬ್ಯಾಂಕ್ ಅಧಿಕಾರಿಗಳು ಸ್ಟಾಂಪ್ ಪಡೆಯದೆ . ಈ ದಾಖಲೆ ಪರಿಶೀಲಿಸಿ ರೇಷನ್ ಕಾಡ್೯ , ಪಿ.ಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟ್ರೇನಿಂಗ್ ಸರ್ಟಿಫಿಕೇಟ್, ಮತ್ತು ಕೇಂದ್ರ ಸರ್ಕಾರ ವತಿಯಿಂದ ಅರ್ಜಿ ಸಲ್ಲಿಸಿದ ನಂತರ ಕ್ಷೌರಿಕ ಸ್ಮಾರ್ಟ್ ಕಾರ್ಡ್, ಹಾಗೂ ಕ್ಷೌರಿಕ ಅಂಗಡಿ ಪರಿಶೀಲನೆ ನಡೆಸಿ ಲೋನ್ ನೀಡಬೇಕು ಎಂದು ಇದಕ್ಕೆ ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೆ ಈ ಪತ್ರಿಕೆಯ ಮೂಲಕ ಮನವಿ ಮಾಡಲಾಗುವುದು, ವರ್ಷವಾದರೊ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜಕ್ಕೆ ಕೇಂದ್ರ ಸರ್ಕಾರದ ಕಿಟ್ ನೀಡದೆ. ಅನ್ಯಾಯ ಮಾಡುವುದು ಸರಿಯಲ್ಲ.? ಈ ಯೋಜನೆ PM ವಿಶ್ವಕರ್ಮ ಯೋಜನೆಯಡಿ, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಫಲಾನುಭವಿಗಳಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಅಗತ್ಯವಿರುವ ಉಪಕರಣಗಳು ಮತ್ತು ಸಲಕರಣೆಗಳನ್ನು ಖರೀದಿಸಲು ₹15,000 ರ “ಟೂಲ್ ಕಿಟ್” ಸಹಾಯಧನವನ್ನು ನೀಡಲಾಗುತ್ತದೆ. ಇದು ಮರು ಪಾವತಿಸಲಾಗದ ಅನುದಾನವಾಗಿದೆ. ತರಬೇತಿ ನಂತರ ಫಲಾನುಭವಿಗಳು ತಮ್ಮ ಉಪಕರಣಗಳನ್ನು ಖರೀದಿಸಲು ಸಹಾಯ ಮಾಡುವುದು. ಈ ಟೂಲ್ ಕಿಟ್ ಹಡಪದ ಅಪ್ಪಣ್ಣ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಸಮಾಜಕ್ಕೆ ನೀಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಯಾವುದೇ ಅಧಿಕಾರಿಗಳು ಇರಲಿ ಈ ವಿಷಯದ ಬಗ್ಗೆ ಮಾಹಿತಿ ತೆಗೆದುಕೊಂಡು ಕ್ಷೌರಿಕ ಸಮಾಜಕ್ಕೆ ನ್ಯಾಯ ಸಿಗಲಿದೆ ಎಂದು ವರದಿಯಾಗಿದೆ.

