ಹಜರತ್ ಲಾಡ್ಲೇಮಶ್ಯಾಕ ಜಾತ್ರೆಯ – ಪೂರ್ವಭಾವಿ ಸಭೆ.
ಯಲಗೋಡ ನ.07

ಪ್ರತಿ ವರ್ಷ ದಂತೆ ಈ ವರ್ಷ ಕೂಡಾ ನವೆಂಬರ್ 23/24 ರಂದು ನಡೆಯುವ ಹಜರತ್ ಲಾಡ್ಲೇಮಶ್ಯಾಕ ದೇವರ ಜಾತ್ರೆ ಮುಹೂರ್ತವದ ಪೂರ್ವಭಾವಿ ಸಭೆ ನಡೆಯಿತು.ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದ ಹಿಂದು ಮುಸ್ಲಿಮ್ ಭಾವೈಕ್ಯತೆಯ ದೇವರಾದ ಹಜರತ್ ಲಾಡ್ಲೇಮಶ್ಯಾಕ ದೇವರ ಜಾತ್ರೆ ಅದ್ದೂರಿ ನಡೆಯುವುದು. ಗ್ರಾಮದ ಎಲ್ಲಾ ಪ್ರಮುಖರು ಕೂಡಿ ಜಾತ್ರೆಯ ಬಗ್ಗೆ ಚರ್ಚೆ ಮಾಡಿ ತಮ್ಮ ಸಲಹೆಯ ಸಹಕಾರ ನೀಡಿದರು. ಜಾತ್ರೆಗೆ ಬಂದ ಸುತ್ತ ಮುತ್ತಲಿನ ಗ್ರಾಮದ ಭಕ್ತರಿಗೆ ಅನ್ನ ದಾಸೋಹ ಇರುತ್ತದೆ ನಮ್ಮ ಗ್ರಾಮದ ಜನರು ಹಾಗೂ ಬೇರೆ ಹಳ್ಳಿಯಿಂದ ಬಂದ ಭಕ್ತರು ಶಾಂತಿಯುತ ದಿಂದ ದೇವರ ಜಾತ್ರೆ ಮಾಡಬೇಕು ಹಾಗೂ ಜಾತ್ರೆಯಲ್ಲಿ ಯಾವ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳುಬೇಕು ಎಂದು ಕಮೀಟಿಯವರು ತಿಳಿಸಿದರು.

ಈ ಪೂರ್ವಭಾವಿ ಸಭೆಯಲ್ಲಿ ಶ್ರೀ ಮಾಡಿವಾಳಯ್ಯ, ಮಠ ರಾಜುಗೌಡ ಪಾಟೀಲ ಮುರಳಿದರ ಕುಲಕರ್ಣಿ ಅಣ್ಣಪ್ಪಗೌಡ ಪಾಟೀಲ ಮೈದುನಪಟೇಲ ಕಣಮೇಶ್ವರ ಗದ್ದಿಗೆಪ್ಪ ದೊಡ್ಡಮನಿ ರಾಜಪಟೇಲ ಕಣಮೇಶ್ವರ ದಸ್ತಗಿರಪಟೇಲ್ ಕಣಮೇಶ್ವರ ಬಾಬು ಬಾಗೇವಾಡಿ ಶಿವಾಪುತ್ರ ಬೂದಿಹಾಳ ಮಹಮ್ಮದ್ ರಪೀಕ ಕಣಮೇಶ್ವರ ಗೋಪಾಲ ದೊಡ್ಡಮನಿ.

ಅಮೈನಪಟೇಲ ಕಣಮೇಶ್ವರ ಲಾಲಪ್ಪ ಕುರಿಕಾಯಿ ಅಮೀನಸಾಬ ಬಾಗವಾನ ಮಾಶ್ಯಾಕ ಬಾಗವಾನ ಮಾಂತಪ್ಪ ಉತ್ಯಾಳ ರವಿ ಗಾಣಿಗೇರ ಅಣ್ಣಪ್ಪ ಕ್ಯಾತನಾಳ ಸಂತೋಷ ಬೂದಿಹಾಳ ಮೌನೇಶ ನಾಟಿಕಾರ ಹುಯೋಗಿ ತಳ್ಳೋಳ್ಳಿ ಲೇಸಪ್ಪ ನಾಟಿಕಾರ ಮಾಂತೇಶ ಕೂಟನೂರ ಮಾಂತೇಶ ತಳ್ಳೋಳ್ಳಿ ಗೋಲ್ಲಪ್ಪ ಮಾಡಬಾಳ ದೇವೇಂದ್ರ ಮಾದರ ಹಾಗೂ ಗ್ರಾಮದ ಸಾರ್ವಜನಿಕರು ಈ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ.ಹಿಪ್ಪರಗಿ

