5001 ಸುಮಂಗಲಿಯರಿಗೆ ಉಡಿ ತುಂಬುವ ಅಪೂರ್ವ – ಧಾರ್ಮಿಕ ಕಾರ್ಯಕ್ರಮ.
ಕರೆಗುಡ್ಡ ನ.08

ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಪೂಜ್ಯರಾದ ಶ್ರೀ ಷ. ಬ್ರ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಪಟ್ಟದಿಕಾರ ರಜತ ಮಹೋತ್ಸವ, ಬೆಳ್ಳಿ ತುಲಾಭಾರ ಮತ್ತು 5001 ಸುಮಂಗಲಿಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಪರಿಷತ್ತಿನ ಸಭಾ ನಾಯಕರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್. ಎಸ್. ಬೋಸರಾಜು ಜೀ ಮತ್ತು ಮಾನ್ವಿ ಶಾಸಕರಾದ ಜಿ. ಹಂಪಯ್ಯ ನಾಯಕ್ ಸಾಹುಕಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ ಬಸವರಾಜ ಪಾಟೀಲ್ ಆನ್ವರಿ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಶಿವಮೂರ್ತಿ, ರುದ್ರಪ್ಪ ಅಂಗಡಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದೊಡ್ಡಬಸಪ್ಪಗೌಡ, ಮಾಜಿ ಸದಸ್ಯರಾದ ಕಿರಲಿಂಗಪ್ಪ ಕವಿತಾಳ, ರಾಜಶೇಖರ್ ಪಾಟೀಲ್ ಜಾನೇಕಲ್, ಮಲ್ಲಯ್ಯ ಸ್ವಾಮಿ, ಶರಣಬಸವಗೌಡ ಬ್ಯಾಗವಾಟ್, ಕೃಷಿ ಬೆಳೆ ಆಯೋಗದ ಮಾಜಿ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ, ಸೈಯದ್ ಖಾಲಿದ ಖಾದ್ರಿ, ತಿಮ್ಮ ರೆಡ್ಡಿ ಬೊಗವತಿ, ಮಲ್ಲನಗೌಡ ನಕ್ಕುಂದಿ.

ಗುಡದಿನ್ನಿ ಶರಣಯ್ಯ ನಾಯಕ್, ರಾಜ ಸುಭಾಷ್ ಚಂದ್ರ ನಾಯಕ್, ಮಹೇಶ್ ಪಾಟೀಲ್ ಗವಿಗಟ್, ಅಂಬಣ್ಣ ಗೌಡ, ದೇವೇಂದ್ರಪ್ಪ ಬೊಮ್ಮನಾಳ, ಚನ್ನಬಸವ ನಾಯಕ್, ಮಹಾಂತೇಶ್, ಬೀರಪ್ಪ ಬಲಟಗಿ, ಸಚಿನ್ ಪಟೇಲ್ ಸೇರಿದಂತೆ ಅಪಾರ ಭಕ್ತ ಸಮೂಹ ಭಾಗವಹಿಸಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

