“ವೀರಭದ್ರ” ಚಲನ ಚಿತ್ರಕ್ಕೆ – ಮುಹೂರ್ತ ಜರುಗಿತು.
ಬೆಂಗಳೂರು ನ.10

ಕೀರ್ತನ ಮೂವಿ ಮೇಕರ್ಸ್ ಹಾಗೂ ಕೆ.ಆರ್.ಎಸ್ ಪ್ರೊಡಕ್ಷನ್‌ರವರ “ವೀರಭದ್ರ” ಎಂಬ ಹೊಸ ಚಲನ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ಮತ್ತು ಮುಹೂರ್ತ ನೆರವೇರಿಸಲಾಯಿತು. ಮಲ್ಲೇಶ್ವರಂ ನ ೧೭ ನೇ. ಅಡ್ಡರಸ್ತೆಯಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಘ್ನೇಶ್ವರನ ಸನ್ನಿಧಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಹೂರ್ತ ನೆರವೇರಿತು.
ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು ಸಾಮಾಜಿಕ ಸಂದೇಶವನ್ನು ಹೊಂದಿದೆ. ಬಾಗಲಕೋಟ ಜಿಲ್ಲೆಯ ಐಹೊಳೆ, ಸಿದ್ದನಕೊಳ್ಳ ಸುತ್ತಮುತ್ತ, ಬೆಂಗಳೂರ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.
ನಿರಂತರ ದಾಸೋಹಮಠ, ಕಲಾಪೋಷಕ ಮಠದ ಧರ್ಮಾಧಿಕಾರಿಗಳಾದ ಡಾ, ಶಿವಕುಮಾರ ಸ್ವಾಮಿಗಳ ಆಶೀರ್ವಾದದೊಂದಿಗೆ ಚಿತ್ರೀಕರಣ ಜನವರಿ ತಿಂಗಳಲ್ಲಿ ನಡೆಯಲಿದೆ. ಬಹುತೇಕ ಕಲಾವಿದರ ಆಯ್ಕೆ ಆಗಿದೆ ಎಂದು ಚಿತ್ರದ ನಿರ್ದೇಶಕ ವಿದ್ಯಾಧರ ಲೋಕೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ದೀಪ ಶಿವರಾಜ್, ತೇಜಸ್ ಕುಮಾರ್, ಹೆಸರಾಂತ ನಿರ್ದೇಶಕರಾದ ಜಿಕೆ ಮುದ್ದುರಾಜ್, ಸಂಕಲನಕಾರ ಶ್ರೀನಿವಾಸ್ ಬಾಬು, ನಿರ್ಮಾಪಕ ಹಾಗೂ ನಿರ್ದೇಶಕ ಭೂಪತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಲಾವಿದರಾದ ಮಮತಾ, ಅಂಜಲಿ, ಅನಿತಾ, ಸತೀಶ್ ಶೆಟ್ಟಿ ನಿರ್ದೇಶಕರಾದ ಶಿವರಾಜು, ಕಾಮಿಡಿ ಟೈಮ್ಸ್ನ ಸ್ಮೈಲ್ ಶಶಿ, ನಾಗರಾಜ್ ವಿಷ್ಣು, ನಂಜಮಣಿ ಮುಂತಾದವರು ಭಾಗವಹಿಸಿದ್ದರು.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಬೆಟ್ಟೆಗೌಡ, ಸ್ಮೈಲ್ ಶಶಿ ಸಂಭಾಷಣೆ, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ಶಿವರಾಜ್, ನಿರ್ದೇಶನ ಈಗಾಗಲೇ ಒಬ್ಬಟ್ಟು ಚಿತ್ರ ನಿರ್ಮಿಸಿ ನಿರ್ದೇಶಿಸಿದ ವಿದ್ಯಾಧರ ಲೋಕೇಶ ಅವರದೇ ನಿರ್ದೇಶನವಿದೆ. ಚಿತ್ರಕ್ಕೆ ವಿದ್ಯಾಧರ ಲೋಕೇಶ ಮತ್ತು ದೀಪಾ ಶಿವರಾಜ್ ಬಂಡವಾಳ ಹೂಡಿದ್ದಾರೆ.
*****
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

