“ಜಗ ಮೆಚ್ಚುವ ಅಚ್ಚಮನದವ”…..

ಸ್ವರಚಿತ ಜಾನಪದ
ದುಡದಂವ್ ಗಟ್ಟಿ ರೊಟ್ಟಿ ಚಟ್ನಿ ತಿಂದಂವ್
ಬಿಸಲಿಗಿ ಮೈಯೊಡ್ಡಿ ನಿಂತಾನ ಮಾತನ್ಯಾಗ
ದಿಟ್ಟತನದವ
ಜವಾರಿ ಊಟ ಕೆಂಪ ಕಾರ ತಿಂದು
ಮನಸನ್ಯಾಗ ಮೋಸವಿರದವ ಯಜಮಾನ
ದೋತಿ ಅಂಗಿ ತೊಟ್ಟು ರೂಮಾಲು ಸುತ್ತಿ
ಮೀಸೆ ತಿರುವಿ ಹೂಂಕರಿಸುವ
ಗಂಡುಗಲಿ ಗುಣದವ
ಗಾಂಭೀರ್ಯ ನಡಗೆಯ ಹತ್ತೂರ ಸರದಾರ
ಅಹಂಕಾರ ತೊರೆದು ಸೀದಾ ಸಾದಾ ಮನುಷ್ಯ
ಕುಲದವ
ವಂಶವೃಕ್ಷದ ಬೇರು ಗಟ್ಟಿಯಾಗಿಸುವ
ನ್ಯಾಯ ನೀತಿ ಧರ್ಮದಲಿ ನಂಬಿಕೆಯವ
ತುತ್ತಿಗೊಮ್ಮಿ ಹಡೆದವರ ಭೂದೇವಿಯ
ಹರಸಿದವರ ನೆನೆಯುತ್ತಾ ನಲಿಯುವವ
ಹಿರಿಕ್ಳಿರಲಿ ಕಿರಕ್ಳಿರಲಿ ಸರಿಸಮದಲಿ
ಗೌರವಿಸುವವ
ಅಕ್ಕ ಪಕ್ಕದವರ ಸಹಾಯ ಸಹಕಾರದ ಹಸ್ತದಿ
ಮುನ್ನುಗ್ಗುವವ
ನಮಗ ವಿದ್ಯಾ ಇಲ್ಲರಿ ಆದ್ರ ಬುದ್ಧಿಗೇನು ಕಮ್ಮಿ
ಇಲ್ಲ ಅನ್ನುವವ
ಆದಿ ಅನಾದಿ ಯಾವಾಗ್ಲೂ ಸಂಸ್ಕಾರ ಸಂಸ್ಕೃತಿ
ದಯೆ ಧರ್ಮದಿ ಬಾಳ್ವೆಯ ಬದಕ ನಮ್ಮದು
ಅಂತಾನ
ಮೆಚ್ಚಲಿ ಮೆಚ್ಚದಿರಲಿ ನನ್ನಿಚ್ಚೆಗೆ ನಾ ಇರಾವ
ಜಗ ಮೆಚ್ಚುವ ಅಚ್ಚ ಮನದವ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

