ಒನಕೆ ಓಬವ್ವ ಅಪ್ರತಿಮ ವೀರ ಮಹಿಳೆ – ವಿಶ್ವಜಿತ್ ಮೆಹತಾ.
ತರೀಕೆರೆ ನ.11

ಕನ್ನಡ ನಾಡು ಕರ್ನಾಟಕ ಜನತೆಯ ಮನದಲ್ಲಿ ನೆಲೆಸಿದ್ದಾರೆ ಒನಕೆ ಓಬವ್ವ ಎಂದು ನಾಡು ಹಬ್ಬಗಳ ಸಮಿತಿ ಅಧ್ಯಕ್ಷರು ತಹಶೀಲ್ದಾರ್ ವಿಶ್ವವಿತ್ ಮೆಹತಾರವರು ಹೇಳಿದರು. ಅವರು ಇಂದು ತಾಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಓನಕೆ ಓಬವ್ವ ರವರ 286 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಒನಕೆ ಓಬವ್ವ ಅಪ್ರತಿಮ ವೀರ ಮಹಿಳೆ,ವಿಜಯನಗರ ಜಿಲ್ಲೆಯ ಗುಡೆಕೋಟೆ ಸಂಸ್ಥಾನದಲ್ಲಿ ಛಲವಾದಿ ಚಿನ್ನಪ್ಪನ ಮಗಳಾಗಿ ಜನಿಸಿ ಚಿತ್ರದುರ್ಗದ ಮದಕರಿ ನಾಯಕನ ಕೋಟೆಯ ಕಾವಲುಗಾರ ಮದ್ದ ಹನುಮಪ್ಪನವರನ್ನು ವಿವಾಹವಾಗಿದ್ದರು, ಒನಕೆಯಿಂದ ನುಸುಳುಕೋರರನ್ನು ಸದೆ ಬಿಡದ ವೀರ ಮಹಿಳೆ ಎಂದು ಹೇಳಿದರು. ಚಲವಾದಿ ಸಮಾಜದ ತಾಲೂಕು ಅಧ್ಯಕ್ಷರಾದ ಎಸ್ ಕೆ ಸ್ವಾಮಿ ಮಾತನಾಡಿ ತರೀಕೆರೆಗೂ ಮತ್ತು ಚಿತ್ರದುರ್ಗಕ್ಕೂ ಅವಿನ ಭಾವ ಸಂಬಂಧವಿದೆ, ಒನಕೆ ಓಬವ್ವನ ವಂಶಸ್ಥರು ತರೀಕೆರೆ, ಅಜ್ಜಂಪುರ, ಲಕ್ಕವಳ್ಳಿ ಭಾಗದಲ್ಲಿ ಇದ್ದಾರೆ ಇವರು ಯಾವುದೇ ಸಭೆ ಸಮಾರಂಭಗಳಿಗೆ ವಿಳ್ಳೆದೆಲೆ ನೀಡಿ ಆಹ್ವಾನ ಮಾಡುವ ಸಂಪ್ರದಾಯವಿದೆ ಎಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಏನ್ ವೆಂಕಟೇಶ್ ಮಾತನಾಡಿ ದಲಿತ ಮಹಿಳೆ ಕರ್ನಾಟಕದ ಇತಿಹಾಸದಲ್ಲೇ ಪ್ರತಿಯೊಬ್ಬರ ನೆನಪಿನಲ್ಲಿ ಇರುವಂತಹ ವೀರ ವನಿತೆ ಇವರು, ಗಂಡನಾದ ಮದ್ಧ ಹನುಮಯ್ಯನಿಗೆ ಊಟಕ್ಕೆ ಕೊಟ್ಟು ನೀರು ತರಲು ಹೋಗಿ ಹೈದರಾಲಿ ಯ ಸೈನ್ಯ ಕೋಟೆಯೊಳಗೆ ನುಸುಳುತ್ತಿರುವ ದೃಶ್ಯ ಕಂಡು ಒನಕೆಯನ್ನೇ ಆಯುಧ ಮಾಡಿಕೊಂಡು ಹೈದರಾಲಿಯ ಸೈನಿಕರನ್ನು ಸದೆ ಬಿಡದು ಪತಿಯ ಭಕ್ತಿ, ನಾಡ ಭಕ್ತಿ,ರಾಜ ಧರ್ಮ ಮೆರೆದವರು. ಜಾನ್ಸಿ ರಾಣಿ ಲಕ್ಷ್ಮೀಬಾಯಿ,ಕಿತ್ತೂರು ಚೆನ್ನಮ್ಮ ರಂತಹ ವೀರ ಮಹಿಳೆಯರ ಸಾಲಿಗೆ ಸೇರಿದವರು ಒನಕೆ ಓಬವ್ವ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿರ್ಮಲ ರವರು ಉಪನ್ಯಾಸ ನೀಡಿದರು,ಅಜ್ಜಂಪುರದ ನೀಲಮ್ಮ, ಉಡೇವಾ ವಿಜಯಮ್ಮ ಉಪಸ್ಥಿತರಿದ್ದು ತಣಿಗೆಬೈಲು ರೇಣುಕಮ್ಮ ಅಧ್ಯಕ್ಷತೆ ವಹಿಸಿದ್ದು ಈ ಸಮಾರಂಭದಲ್ಲಿ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು, ಪ್ರಸನ್ನ ಸ್ವಾಗತಿಸಿ ಶಿರಸ್ತೆದಾರ್ ನಟರಾಜ್ ರವರು ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

