ಶ್ರೀ ವಾಸವಿ ಯುವಜನ ಸಂಘ ವತಿಯಿಂದ – ನಡೆದ 8 ನೇ. ಕಾರ್ತಿಕ ದೀಪೋತ್ಸವ.
ಮಾನ್ವಿ ನ.12

ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶ್ರೀ ವಾಸವಿ ಯುವಜನ ಸಂಘ ವತಿಯಿಂದ ನಡೆದ 8 ನೇ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ತಾ,ಅಧ್ಯಕ್ಷರಾದ ಆರ್.ಮುತ್ತುರಾಜ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಕತ್ತಲಿನಿಂದ ಬೆಳಕಿನ ಕಡೆ ನಡೆಯುವುದೆ ಕಾರ್ತಿಕ ದೀಪೋತ್ಸವ ವಾಗಿದೆ ಎಂದು ತಿಳಿಸಿದರು.ಧರ್ಮ ಮತ್ತು ಸಂಸ್ಕೃತಿ ವಿಷಯದ ಕುರಿತು ವಾಗ್ಮಿ ಹಾರೀಕ ಮಂಜುನಾಥ ಉಪನ್ಯಾಸ ನೀಡಿ ಯಾವುದು ಧರಿಸಲ್ಪಡುತ್ತದೆಯೊ ಅದೆ ಧರ್ಮ ಎನ್ನಿಸಿ ಕೊಳ್ಳುತ್ತದೆ.

ಕಾರ್ತಿಕ ದೀಪದ ಪ್ರಭೆಯಲ್ಲಿ ಬರುವ ಎಲ್ಲರೀಗೂ ಕೂಡ ಭಗವಂತನ ಅನುಗ್ರಹ ದೊರೆಯುತ್ತದೆ. ಅಗ್ನಿ ಸ್ವರೂಪದಲ್ಲಿ ಜಗನ್ಮಾತೆಯಾದ ವಾಸವಿ ಮಾತೆಯು ನಮ್ಮಗೆ ಕಾಣುವ ಮೂಲಕ ನಮ್ಮ ಅಂತರಂಗದಲ್ಲಿ ಚಲನಾ ಶಕ್ತಿಯನ್ನು ಬೆಳಗಿಸುತ್ತಾಳೆ ಸಮಾಜದಲ್ಲಿ ಎಲ್ಲಾ ಸಮಯಗಳಲ್ಲಿ ಹಾಗೂ ಎಲ್ಲಾ ಕಾಲಗಳಲ್ಲಿ ಧರ್ಮದ ಕಾರ್ಯಗಳಿಗೆ, ಹಾಗೂ ಧರ್ಮದ ರಕ್ಷಣೆಯ ಸಮಯದಲ್ಲಿ, ಮುಂದಿನ ಪಿಳಿಗೆಗೆ ಧರ್ಮವನ್ನು ಮುಂದುವರೆಸುವಲ್ಲಿ ಆರ್ಯವೈಶ್ಯ ಸಮುದಾಯದವರು ನಿರಂತರವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ನಮ್ಮ ಮನೆಗಳಲ್ಲಿನ ಮಕ್ಕಳಿಗೆ ಹಿಂದಿನಿಂದಲ್ಲೇ ಧಾರ್ಮಿಕ ಆಚರಣೆಗಳ ಬಗ್ಗೆ, ಧರ್ಮ ಗ್ರಂಥಗಳಲ್ಲಿನ ಬೋಧನೆಗಳ ಬಗ್ಗೆ ಆಚರಣೆಗಳ ಬಗ್ಗೆ ಪಾಲಕರು ಅಭ್ಯಾಸ ಮಾಡಿಸಿದಾಗ ಮಾತ್ರ ಮುಂದಿನ ಪಿಳೆಗೆಗೆ ಹಿಂದೂ ಧರ್ಮ ಮುಂದುವರೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶ್ರೀ ವಾಸವಿ ಯುವಜನ ಸಂಘ ವತಿಯಿಂದ ವಾಗ್ಮಿ ಹಾರೀಕ ಮಂಜುನಾಥ, ನ.ಯೋ.ಪ್ರ. ನಾಮನಿರ್ದೇಶನ ಸದಸ್ಯರಾಗಿ ನೂತನವಾಗಿ ಆಯ್ಕೆಯಾಗಿರುವ ಮನ್ಸಾಲಿ ಯಂಕಯ್ಯಶೆಟ್ಟಿ, ಹಿರಿಯ ಉಪನ್ಯಾಸಕರಾದ ಭಂಡಾರಿ ಸತ್ಯನಾರಾಯಣ ಶೆಟ್ಟಿ, ಶಿಕ್ಷಕಿ ಬಿ.ಟಿ ಲಕ್ಷ್ಮಿ, ಸಿ.ಆರ್,ಪಿ, ವೆಂಕಟೇಶ ಬೈಲಮರ್ಚೆಡ್, ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶಿಕ್ಷಕಿ ವಿ, ದೀಪಾ, ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಆರಾಧ್ಯ ರವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸಾಮೂಹಿಕವಾಗಿ ದೀಪವನ್ನು ಬೆಳಗಿಸುವ ಮೂಲಕ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ನ.ಯೋ.ಪ್ರ. ಸದಸ್ಯರಾದ ಮನ್ಸಾಲಿ ಯಂಕಯ್ಯಶೆಟ್ಟಿ, ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಬಿ.ಈರಣ್ಣ ಶೆಟ್ಟಿ, ಕೇಶವಯ್ಯಶೆಟ್ಟಿ, ವಲ್ಲೂರುರಮೇಶ, ಶ್ರೀ ವಾಸವಿ ಯುವಜನ ಸಂಘದ ಗೌ.ಅಧ್ಯಕ್ಷರಾದ ಗಾಣದಾಳ ಆಂಜನೇಯ್ಯ, ತಾ.ಅಧ್ಯಕ್ಷರಾದ ವಲ್ಲೂರು ಬಸವರಾಜ, ಕಾರ್ಯದರ್ಸೀ ಕೊಂಡ ಶ್ರೀಕಾಂತ ಶೆಟ್ಟಿ,ಬಿ.ರಾಮಚಂದ್ರ, ನಿಕಟ ಪೂರ್ವ ಅಧ್ಯಕ್ಷರಾದ ಕೆ.ನವೀನ್ ಕುಮಾರ ಪೋತ್ನಾಳ್,ಶ್ರೀ ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಜೆ. ಲಕ್ಷ್ಮಿ ರಾಮಾಂಜನೇಯ್ಯಶೆಟ್ಟಿ ಶ್ರೀ ವಾಸವಿ ವನಿತಾ ಸಂಘದ ಅಧ್ಯಕ್ಷರಾದ ರಿಂದ ರಾಘವೇಂದ್ರ ಶೆಟ್ಟಿ ಸೇರಿದಂತೆ ಅವೋಪ ಸಂಘದ ಪದಾಧಿಕಾರಿಗಳು ಹಾಗೂ ಆರ್ಯವೈಶ್ಯ ಸಮುದಾಯದ ಮುಖಂಡರು ಭಾಗವಹಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾ ನಕ್ಕುಂದಿ ಮಾನ್ವಿ

