ಸರ್ಕಾರಿ ಆಸ್ಪತ್ರೆ ಯಲ್ಲಿ ಒನಕೆ ಓಬವ್ವ ನವರ – ಜಯಂತೋತ್ಸವ ಕಾರ್ಯಕ್ರಮ ಜರುಗಿತು.
ಸಿಂದಗಿ ನ 12

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೀರ ವನಿತೆ ಒನಕೆ ಓಬವ್ವನವರ ಜಯಂತ್ಯೋತ್ಸವ ಆಚರಣೆ ಮಾಡಿದರು,ಕನ್ನಡದ ವೀರ ವನಿತೆ ಹೆಮ್ಮೆಯ ದಿಟ್ಟತನದ ನಾರಿ ಒನಕೆ ಓಬವ್ವ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನಕೋಟೆ ಹೈದರಾಲಿ ಸೈನ್ಯ ಮುತ್ತಿಗೆ ಹಾಕಿದಾಗ ಆ ಸೈನ್ಯಕ್ಕೆ ಕೋಟೆ ಒಳಗಡೆ ಹೋಗುವ ದಾರಿ ಗೊತ್ತಿಲ್ಲದೆ ಇದ್ದಾಗ ಒಂದು ಕಿಂಡಿಯ ಮೂಲಕ ಒಳಗಡೆ ಸೈನ್ಯ ಬರುತ್ತಿತ್ತು ಅಂತಾ ಸಮಯದಲ್ಲಿ ಒನಕೆ ಓಬವ್ವನ ಪತಿಯು ಕೋಟೆಯ ಕಹಳೆ ಊದುವ ಕಾರ್ಯವನ್ನು ನಿರ್ವಹಿಸುತ್ತಿದ್ದನು ಆ ಸಮಯದಲ್ಲಿ ಓಬವ್ವನ ಪತಿಯು ಊಟಕ್ಕೆ ಬಂದಿರುತ್ತಾನೆ. ಬಂದಾಗ ಅವನಿಗೆ ನೀರು ಇಲ್ಲದ ಕಾರಣ ನೀರನ್ನು ತೆಗೆದುಕೊಂಡು ಬರಲು ಒನಕೆ ಓಬವ್ವಳು ಆ ನೀರಿನ ಕೊಳಕ್ಕೆ ಬಂದಾಗ ಸೈನ್ಯವು ಕಿಂಡಿಯ ಮೂಲಕ ಒಳಗೆ ಬರುವುದನ್ನು ನೋಡಿ ಇದನ್ನು ತಡೆಯ ಬೇಕೆಂದು ಕೈಗೆ ಸಿಕ್ಕ ಒನಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಒಬ್ಬೊಬ್ಬರ ಸೈನಿಕರ ಅಲ್ಲೇ ರುಂಡ ಚಂಡಾಡಿ ಸುಮಾರು ಸಹಸ್ರಾರು ಜನರ ಸೈನಿಕರನ್ನು ಸದೆ ಬಡಿದರು ಈ ದೃಶ್ಯದಲ್ಲಿ ಒನಕೆ ಒಬ್ಬಳು ದುರ್ಗಾ ಮಾತೆಯಂತೆ ಗೋಚರಿಸುತ್ತಿದ್ದಳು ಇಂತಹ ಒಂದು ಭಯಾನಕ ದೃಶ್ಯ ಮತ್ತು ಒನಕೆ ಓಬವ್ವಳ ವಿರಾವೇಶವಾಗಿ ಹೋರಾಟ ಮಾಡುವುದನ್ನು ಕಂಡ ಗಂಡನು ತಡ ಮಾಡದೆ ರಣ ಕಹಳೆಯನ್ನು ಊದುತ್ತಾನೆ ಊದಿದಾಗ ಚಿತ್ರದುರ್ಗದ ಕೋಟೆಯ ಸೈನಿಕರ ಎಲ್ಲಾರು ಬಂದು ಹೋರಾಟ ಮಾಡುತ್ತಾರೆ ಇಂಥ ಒಂದು ರಣರಂಗದಲ್ಲಿ ಒಣಕೆಯನ್ನು ಹಿಡಿದು ಶತ್ರು ಸೈನ್ಯವನ್ನು ಚಂಡಾಡಿ ಸದೆ ಬಡೆದ ಮಹಾನ ವೀರಮಾತೆ. ದಿಟ್ಟ ಮಹಿಳೆ ವನಕೆ ಓಬವ್ವಳನ್ನು ನಾವು ಅವರ ತ್ಯಾಗ ಮತ್ತು ಸಮಯ ಪ್ರಜ್ಞೆ ನಿಜವಾಗಲೂ ಮೆಚ್ಚಲೇ ಬೇಕು ಇವತ್ತು ತಾಯಿ ನಾಡಿಗಾಗಿ ಹೋರಾಡಿದ ಆ ತಾಯಿಗೆ ಕೋಟಿ ಕೋಟಿ ನಮನಗಳು ಎಂದ ಆಸ್ಪತ್ರೆ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಾದ ರಾಜಶೇಖರ್ ನರಗೋಧಿ ವೀರ ವನತೆ ಒನಕೆ ಓಬವ್ವನವರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಡಾಕ್ಟರ ಮಾಂತೇಶ್ ಹಿರೇಮಠ. ಡಾಕ್ಟರ.ಮೌನೇಶ್ ಬಡಿಗೇರ.ಸುರೇಶ್ ಪಾಟೀಲ ಜಗು ಡೋಣೂರ ಸಂತೋಷ್ ಬುಳ್ಳ ಹಾಗೂ ಸುನಿಲ್ ನೇಮಶೆಟ್ಟಿ ಸವಿತಾ ಹಿರೇಪಟ ರಾಜೇಶ್ವರಿ ಮುರಗಾನುರ. ಭಾಗಮ್ಮ ತಳವಾರ್ ಗೀತಾ ಹಡಪದ ಪ್ರಕಾಶ್ ಬಾಗಲಕೋಟ ಶಂಕರ ಮನಿಗೇರಿ ಶಂಕರ್ ಕೆರೂಟಿಗಿ,ಆಸ್ಪತ್ರೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

