ಶ್ರೀ ಪುರುರಾಜ್ ಸಿಂಗ್ ಸೋಲಂಕಿ, ಭಾ.ಆ.ಸೇ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಮಾನ್ವಿ ರವರು ವಿವಿಧ – ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡಿದರು.
ಮಾನ್ವಿ ನ.12

11-11-2025 ರಂದು ತಾಲೂಕ ಪಂಚಾಯತ ಸಭಾಂಗಣದಲ್ಲಿ ಮಾನ್ವಿ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ನಡೆಸಿದರು.

ಮೊದಲಿಗೆ ತೆರಿಗೆ ವಸೂಲಾತಿಯ ಬಗ್ಗೆ ಚರ್ಚೆ ಮಾಡಿದರು, ಒಟ್ಟು ವಸುಲಾತಿಯ ಶೇಕಡ 20% ಕಿಂತ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳಿಗೆ ತಮ್ಮ ನಿಗದಿತ ಗುರಿಗಣವಾಗಿ ಪ್ರಗತಿ ಸಾಧಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕರ ವಸೂಲಿಗಾರರಿಗೆ ತಿಳಿಸಿದರು.

ಒಂದು ವರ್ಷದಲ್ಲಿ ಕನಿಷ್ಠ ಎರಡು ಕೆ ಡಿ ಪಿ ಸಭೆ ನಡೆಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತಿಯಲ್ಲಿ ಇ -ಹಾಜರಾತಿ ಬಗ್ಗೆ ಚರ್ಚಿಸಲಾಗಿ ಕಡಿಮೆ ಹಾಜರಾತಿ ಹಾಕಿರುವ ಗ್ರಾಮ ಪಂಚಾಯತಿಯಲ್ಲಿ 100% ಎಲ್ಲಾ ಸಿಬ್ಬಂದಿಗಳು ಹಾಜರಾತಿ ಹಾಕಲು ಪಿಡಿಓ ಗಳಿಗೆ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ವೇತನ ಪಾವತಿ ಬಗ್ಗೆ ಚರ್ಚೆ ಮಾಡಲಾಗಿ ಯಾವ ಯಾವ ಸಿಬ್ಬಂದಿಯೂ ವೇತನ ಬಾಕಿ ಇದೆ ಮತ್ತು ಎಷ್ಟು ತಿಂಗಳಿನಿಂದ ವೇತನ ಬಾಕಿ ಇದೆ ಎಂಬುದರ ಬಗ್ಗೆ ದಿನಾಂಕ :15-11-2025 ರ ಒಳಗೆ ಮಾಹಿತಿ ನೀಡಲು ಸೂಚನೆ ನೀಡಿದರು.
ನರೇಗ ಯೋಜನೆ ಅಡಿ E-KYC ಪ್ರಗತಿ ಪರಿಶೀಲನೆ ಮಾಡಲಾಗಿ. ಶೇಕಡ 70% ಕಡಿಮೆ ಇರುವ ಗ್ರಾಮ ಪಂಚಾಯಿತಿಗಳಾದ ಜಾನೇಕಲ್ ಮತ್ತು ಉಟಕನೂರು ಗ್ರಾಮ ಪಂಚಾಯತಿಗಳು ತಮ್ಮ ಗುರಿಗನಗುಣವಾಗಿ ಪ್ರಗತಿ ಸಾಧಿಸಲು ಪಿಡಿಓ ಗಳಿಗೆ ತಿಳಿಸಿದರು.

ಗ್ರಾಕೂಸ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪಿಡಿಒ ಗಳಿಗೆ ಸೂಚಿಸಲಾಯಿತು, ಕೆಲವು ತಾಂತ್ರಿಕ ಸಮಸ್ಯೆಗಳಿರುವಂತಹ ಸಮಸ್ಯೆಗಳನ್ನು ಜಿಲ್ಲಾ ಪಂಚಾಯಿತಿ ಮೂಲಕ ಬಗೆಹರಿಸಲಾಗುವುದು ಎಂದು ತಿಳಿಸಿದರು.
ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ಮುಗಿದಿರುವ ಸದರಿ ಕಾಮಗಾರಿಗಳಿಗೆ ಮುಕ್ತಾಯ ದಿನಾಂಕವನ್ನು ನಮೂದಿಸಲು ತಿಳಿಸಲಾಯಿತು.

ನರೇಗಾ ಯೋಜನೆ ಅಡಿಯಲ್ಲಿ ನಮೂನೆ -06 ರಲ್ಲಿ ಅರ್ಜಿ ಪಡೆದು ಕೆಲಸ ನೀಡಲು ತಿಳಿಸಿದೆ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗರಿ ಗರಿಷ್ಠ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಪಿಡಿಓ ರವರಿಗೆ ತಿಳಿಸಿದರು.
ಸ್ವಚ್ಛ ಸಂಕೀರ್ಣ ಘಟಕದ ಬಗ್ಗೆ ಮಾಹಿತಿ ಪಡೆದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕವಾಗಿ ಶಡ್ ನಿರ್ಮಾಣ ಮಾಡಿ, ಪ್ರತಿದಿನ ಕಸ ವಿಲೇವಾರಿ ಮಾಡಿರುವ ಬಗ್ಗೆ ಗ್ರೂಪಲ್ಲಿ ಫೋಟೋ ಶೇರ್ ಮಾಡಲು ತಿಳಿಸಿದರು.

ಸದರಿ ಸಂದರ್ಭದಲ್ಲಿ ಖಾಲಿದ್ ಅಹ್ಮದ್ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಮಾನ್ವಿ, ಶ್ರೀಮತಿ ದೀಪಾರಳಿಕಟ್ಟಿ ಸಾಯ್ಕಿ ನಿರ್ದೇಶಕರು ಪಂಚಾಯತ್ ರಾಜ್ ಇಲಾಖೆ ಮಾನ್ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸಹಾಯಕರು, ಡಿಇಓಗಳು, ಕರ ವಸೂಲಿಗಾರರು, ನರೇಗಾ ಸಿಬ್ಬಂದಿಗಳು, ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಇನ್ನಿತರ ಸಿಬ್ಬಂದಿ ವರ್ಗದವರು ಹಾಜರಿದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್ ಭಾಷಾ ನಕ್ಕುಂದಿ ಮಾನ್ವಿ
