ಕಬ್ಬು ಕಟಾವು ಮತ್ತು ಸಾಗಾಣಿಗಾನಿದಾರರ ಧರಣಿ ಸತ್ಯಾಗ್ರಹ ಸ್ಥಳಕ್ಕೆ – ಮಾಜಿ ಶಾಸಕರ ಭೋಸನೂರ ಭೇಟಿ.
ಆಲಮೇಲ ನ.13

ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಸಂಘ ಆಲಮೇಲ ಸಮಿತಿ. ಆಲಮೇಲ ಕಬ್ಬು ಕಟಾವು ಮತ್ತು ಸಾಗಾಣಿಕೆದಾರರ ಸಂಘ ಹಾಗೂ ಟ್ರ್ಯಾಕ್ಟರ್ ಮಾಲೀಕರ ಸಂಘ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ ಎದುರು ಬಾಕಿ ಹಣಕ್ಕಾಗಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು ಧರಣಿ ಸ್ಥಳಕ್ಕೆ ಮಾಜಿ ಶಾಸಕರು ರಮೇಶ್ ಭೂಸನೂರ್ ಸ್ಥಳಕ್ಕೆ ಆಗಮಿಸಿ ಟ್ರ್ಯಾಕ್ಟರ್ ಮಾಲೀಕರಿಗೆ ಬರ ಬೇಕಾದ 2023-24 ನೇ. ಸಾಲಿನ ಬಾಕಿ ಹಣ ನೀಡುವಂತೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ನಿಮಗೆ ನ್ಯಾಯ ಸಿಗುವಂತೆ ಮಾಡುತ್ತೇನೆ ನಿಮ್ಮ ಬೆಂಬಲಕ್ಕೆ ಸದಾ ನಾನು ಇರುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಲಮೇಲ ತಾಲೂಕಿನ ಟ್ರ್ಯಾಕ್ಟರ್ ಮಾಲೀಕರು ಮತ್ತು ಕಬ್ಬು ಕಟಾವು ಹಾಗೂ ಸಾಗಾಣಿಕೆದಾರರ ಸಂಘದ ಅಧ್ಯಕ್ಷರು ಶಶಿಧರ್ ನಾಯ್ಕೋಡಿ ಉಪಾಧ್ಯಕ್ಷರು ಮಾಂತೇಶ್ ಕತ್ತಿ ಹಾಗೂ ಸರ್ವ ಸದಸ್ಯರು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರ ಮುಖಂಡರು ಉಪಸ್ಥಿತರಿದ್ದರು ಅಲಮೇಲ್ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದ ಸೂಕ್ತ ಬಂದೋಬಸ್ತಿನಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ ಆಲಮೇಲ

