ಲೋಚನ ಕ್ರಿಯೇಶನ್ಸ್ ಅವರ “ವಕ್ರತುಂಡ” ಚಲನ ಚಿತ್ರದ – ಟೀಸರ್ ಬಿಡುಗಡೆ.
ಬೆಂಗಳೂರು ನ.13

ಲೋಚನ ಕ್ರಿಯೇಶನ್ಸ್ ಅವರ “ವಕ್ರತುಂಡ” ಗ್ಯಾಂಗ್ಸ್ ಆಫ್ ಸುಲ್ತಾನ್ ಕಾಲೋನಿ ಕನ್ನಡ ಚಲನ ಚಿತ್ರದ ಟೀಸರ್ ಬೆಂಗಳೂರಿನ ಜಯ ನಗರದ ಶಾಲಿನಿ ಮೈದಾನದಲ್ಲಿ ಬಿಡುಗಡೆ ಮಾಡಲಾಯಿತು.

ಪೀಸ್ ಆಟೋ ಮತ್ತು ಆಟೋ ಚಾಲಕರ ಸಂಘ ಆಯೋಜಿಸಿದ, ಆಟೋ ಡೇ, ಶಂಕರ್ ನಾಗ್ ಅವರ ಜನ್ಮ ದಿನ, ಡಾ, ವಿಷ್ಣುವರ್ಧನ್ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದ ಸಂಭ್ರಮದ ಜೊತೆಗೆ ಟೀಸರ್ ಬಿಡುಗಡೆಯನ್ನು ಮಹಿಳಾ ಆಟೋ ಚಾಲಕರು ಹಾಗೂ ಆಟೋ ಚಾಲಕರ ಪ್ರತಿ ನಿಧಿಗಳು ನೆರವೇರಿಸಿದರು. ಇದು ಜನ ಸಾಮಾನ್ಯರ ಶಕ್ತಿಯ ಪ್ರತೀಕವಾಗಿದ್ದು ವಕ್ರತುಂಡ ಚಿತ್ರವು ಗಣೇಶ ಚತುರ್ಥಿ, ಸಾಮಾಜಿಕ ಏಕತೆ, ಮತ್ತು ಯುವ ಜನತೆಯ ಜಾಗೃತಿ ವಿಷಯಗಳನ್ನು ಆಧರಿಸಿ, ಸುಲ್ತಾನ್ ಕಾಲೋನಿಯ ಹಿನ್ನಲೆಯಲ್ಲಿ ಭಾವನಾತ್ಮಕವಾಗಿ ಚಿತ್ರಿತವಾಗಿದೆ. ಇದು ಭಕ್ತಿಯ ಶಕ್ತಿ ಮತ್ತು ನಗರ ಜೀವನದ ಸವಾಲುಗಳನ್ನು ಒಟ್ಟಿಗೆ ತರುವ ವಿಶಿಷ್ಟ ಕಥೆ ಆಗಿದೆ. ಬೆಂಗಳೂರು ಸುತ್ತಮುತ್ತ ಮತ್ತು ಸ್ಟುಡಿಯೋಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಲ್ಲದೆ ಸಿಜಿ ತಂತ್ರಗಳನ್ನು ಬಳಸಿ ಐವತ್ತು ದಿನಗಳ ಕಾಲ ತಯಾರಿಸಲಾಗಿದೆ ಎಂದು ನಿರ್ಮಾಪಕ ಲಕ್ಕಿ ಶಂಕರ್ ಹೇಳಿದರು.

ರಂಜಿತ್ ರಾಘವ ಮತ್ತು ನಾಗಮೂರ್ತಿ ಸಾಹಿತ್ಯ ರಚನೆಯ ಮೂರು ಹಾಡುಗಳಿಗೆ ಶಶಾಂಕ್ ಶೇಶಿಗಿರೆ, ನಾಗರಾಜ್ ಸುರ್ಗಾವಿ, ಭೀ ರೀ ಮರಾಯ್ ಹಾಡಿದ್ದಾರೆ. ಡಿಸೆಂಬರ್ ಕೊನೆಯ ವಾರ ಅಥವಾ ಜನೇವರಿ ಮೊದಲನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ದೇಶಕ ಹರೀಶ್ ಕುಂದೂರು ತಿಳಿಸಿದರು.

ತಾರಾಂಗಣದಲ್ಲಿ ಲಕ್ಕಿ ಶಂಕರ್, ರಚಿತಾ ಮಹಾಲಕ್ಷ್ಮಿ, ಉಮೇಶ್ ದಾವಣಗೆರೆ, ಮೂಗ್ ಸುರೇಶ್, ಉಮೇಶಾನ, ಅಮಿತ್ ರಾವ್, ಆಟೋ ನಾಗರಾಜ್, ಸಂಗಮೇಶ್ ಉಪಾಧ್ಯಾಯ, ಅನುಷಾ, ಮಾಸ್ಟರ್ ಅಥರ್ವ, ಮಾಸ್ಟರ್ ಲೋಚನ್, ಮಾಸ್ಟರ್ ಯಶ್, ಬೆಬಿ ಪ್ರೇಕ್ಷಾ, ಭುವನ ಮೊದಲಾದವರಿದ್ದಾರೆ. ತಾಂತ್ರಿಕ ವರ್ಗದಲ್ಲಿ- ಛಾಯಾಗ್ರಹಣ ಜೈ ಆನಂದ್, ಸಂಕಲನಕುಮಾರ್, ಸಂಗೀತ ಜೆಮ್ಸ್ ಆರ್ಕಿಟೆಕ್ಟ್, ಹಿನ್ನೆಲೆ ಸಂಗೀತ ಅಕ್ಷಯ್ ರಿಷಬ್, ಪಿಆರ್‌ಓ ನಾಗೇಂದ್ರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಪ್ರಸಾಧನ ಬಾಷಾ, ಚಿತ್ರಕಥೆ ಜೊತೆಗೆ ಹರೀಶ್ ಕುಂದೂರು ನಿರ್ದೇಶನ ಚಿತ್ರಕ್ಕಿದೆ. ಸಹ-ನಿರ್ಮಾಪಕರು ಉಮೇಶ್ ಬಿ. ಯು. ದಾವಣಗೆರೆ. ಈ ಹಿಂದೆ ನೈಂಟಿ ಕುಡಿ ಪಲ್ಟಿ ಹೊಡಿ, ದೇವರಾಣೆ, ಸಿಗರೇಟ್ ಸೇದ್ಬೇಡಿ. ಜಿಲೇಬಿ ಚಿತ್ರಗಳನ್ನು ನಿರ್ಮಿಸಿದ್ದ ಲಕ್ಕಿ ಶಂಕರ್ ನಿರ್ಮಾಪಕ ಆಗಿದ್ದಾರೆ.
*****
– ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
