ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ – ಕಲೋತ್ಸವ ಕಾರ್ಯಕ್ರಮ ಜರುಗಿತು.
ಕೊಂಡಗೂಳಿ ನ.13

ಪ್ರಯತ್ನವನ್ನು ಮಾಡಿ ಸೋಲು, ಆದರೆ ಪ್ರಯತ್ನವನ್ನು ಮಾಡುವುದರಲ್ಲೇ ಸೋಲಬೇಡ ಎನ್ನುವಂತೆ ವಿದ್ಯಾರ್ಥಿಗಳು ನಿರಂತರ ಪ್ರಯತ್ನವನ್ನು ಮಾಡುವ ಮನೋಭಾವವನ್ನು ಚಿಕ್ಕಂದಿನಲ್ಲಿಯೇ ರೂಢಿಸಿ ಕೊಳ್ಳಬೇಕು ಎಂದು ಕೊಂಡಗೂಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಾಗಿರುವ ದಾವಲಬಿ.ಹು ಸೋಲಾಪುರ ಅವರು ಹೇಳಿದರು. ತಾಲೂಕಿನ ಬಿ.ಬಿ ಇಂಗಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೊಂಡಗೂಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಆರ್.ಪಿ ಎಮ್.ಎನ್ ಒಡೆಯರ್ ಅವರು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವ ಮೂಲಕ ಸರ್ಕಾರದ ಈ ಒಂದು ಮಹತ್ವಪೂರ್ಣ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನ ಗೊಳಿಸೋಣ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿ.ಬಿ ಇಂಗಳಗಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಎಸ್.ಆರ್ ಮೋಮಿನ ಅವರು ಗೆಲುವು ಅಂತಿಮವಲ್ಲ, ಸೋಲು ಮಾರಕವಲ್ಲ, ಮರಳಿ ಯತ್ನವ ಮಾಡುವ ಮನೋಸ್ಥೈರ್ಯ ಮಕ್ಕಳಲ್ಲಿ ಇರಬೇಕು ಎಂದು ನೆರೆದಿದ್ದ ಮಕ್ಕಳನ್ನು ಹುರಿದುಂಬಿಸಿದರು.

ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಕೊನೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಕಾರ್ಯಕ್ರದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಗುರುರಾಜ ಸಜ್ಜನ ಸಲೀಂ ವಠಾರ, ಮಲ್ಲಿಕಾರ್ಜುನ ನದ್ಯಾಳ ಲಾಲಬಿ ನದಾಫ್ ಮಹಾಂತೇಶ. ಮುದನೂರ ಅಶೋಕ ಹೊಸಮನಿ, ಶಿಕ್ಷಣ ಪ್ರೇಮಿ ಷಣ್ಮುಖ. ಕನ್ನೂರ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಬಿ.ಎಚ್ ದಲ್ಲಾಳಿ ಮುಖ್ಯ ಗುರುಗಳಾದ ಬಿ.ಬಿ ಅಗ್ನಿ, ಮಹಾಂತೇಶ ಮಮದಾಪುರ, ಚಂದು ನಾಯಕ,ಜಾನಪ್ಪ. ಸಿಂದಗಿ ಬಿ.ಡಿ ಮುಲ್ಲಾ, ಶೈಲಾ.ಕೆಂಭಾವಿ, ಪರಶುರಾಮ.ಗಡಗಿ, ರಾಜು ನಾಯಕ ಸೇರಿದಂತೆ ಕೊಂಡಗೂಳಿ ಕ್ಲಸ್ಟರಿನ ಎಲ್ಲಾ ಸರ್ಕಾರಿ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಗಳು ಸಹ ಶಿಕ್ಷಕರು ಅತಿಥಿ ಶಿಕ್ಷಕರು ಮಕ್ಕಳು ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶಂಕರರಾವ್. ಕುಲಕರ್ಣಿ ನಿರೂಪಿಸಿದರು, ಎಸ್.ಎಸ್ ಕುಂಬಾರ ಸ್ವಾಗತಿಸಿದರು, ಎನ್.ಎಸ್ ಮೈರಾ ವಂದಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

