ಶ್ರೀಮಾತೆ ಶಾರದಾದೇವಿಯವರ ಜನನದ ಕಥೆ ಕುತೂಹಲಕಾರಿ – ಕುಮಾರಿ ಪುಷ್ಪಲತಾ.
ಚಳ್ಳಕೆರೆ ನ.13

ಶ್ರೀಮಾತೆ ಶಾರದಾದೇವಿಯವರ ಜನನದ ಕಥೆ ಬಹಳ ಕುತೂಹಲಕಾರಿ ಯಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕಿ ಕುಮಾರಿ ಪುಷ್ಪಲತಾ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶಾರದಾ ಮಾತೆಯವರ ಜನನದ ಕಥೆಯನ್ನು ಹೇಳಿದರು.

ಈ ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರದ ಪಠಣ ನಡೆದರೆ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ಅವರು ನಡೆಸಿಕೊಟ್ಟರೆ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರು “ಶ್ರೀಮದ್ ಭಗವದ್ಗೀತೆಯ ಕರ್ಮಯೋಗ” ದ ಶ್ಲೋಕಗಳನ್ನು ಕಲಿಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಸಂಗೀತ, ಸುಧಾಮಣಿ, ಡಾ, ಭೂಮಿಕಾ, ಯಶಸ್ವಿ, ಯುಕ್ತ, ಶ್ರೀನಿಹಾಂತ್, ವೈಷ್ಣವಿ, ಕೋಮಲ ಸಿರಿ, ವಶಿಷ್ಠಾ, ವಿಷ್ಣು, ವಿವಿಕ್ತ, ಪ್ರಣಾಮ್ಯ, ನಮ್ರತಾ, ಜಶ್ವಿತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

