“ಮಕ್ಕಳು ದೇಶದ ಮುತ್ತುಗಳು”…..

ಬನ್ನಿ ನನ್ನ ಮುದ್ದು ಮಕ್ಕಳು
ಪ್ರೀತಿಯ ನಗುವಿನಿಂದ ಶಾಲೆಗೆ
ನಾಳಿನ ಪ್ರಜೆಗಳು ನೀವು
ಕೀರ್ತಿಸಾರುವ ಪತಾಕೆ ನೀವು
ವಿದ್ಯೆ ಕಲಿಸುವ ಅರಸರು ನೀವು
ಭಾರತ ಮಾತೆಯ ಮಕ್ಕಳು ನೀವು
ದೇಶದ ಸಂಸ್ಕೃತಿ ಬೆಳೆಸುವ
ಪೈರು ನೀವು
ಏಕತೆಯ ಸಾರುವ ಭಾವುಟ ನೀವು
ಅನಕ್ಷರತೆಯ ಓಡಿಸುವ
ಅಕ್ಷರಗಳು ನೀವು
ಬನ್ನಿ ನನ್ನ ಮುದ್ದು ಮಕ್ಕಳೇ
ಸ್ವತಂತ್ರ ಭಾರತದ ಸ್ವತುಗಳು ನೀವು
ಇತಿಹಾಸದ ಪುಟಗಳು ನೀವು
ಸಮಾಜದ ನಿರ್ಮಾಣಕರು ನೀವು
ಕನ್ನಡ ಮಣ್ಣಿನ ಸೊಗಡು ನೀವು
ಕಂಪು ಬೀರುವ ಚಿತ್ತಾರದ ಶಿಲ್ಪಿಗಳು ನೀವು
ಜಾತಿ ಮತ ಭೇದ ಭಾವ ತೊಲಗಿಸುವ
ಗ್ರಂಥಗಳು ನೀವು
ಸಾಮಾನತೆಯ ಮೂಡಿಸುವ ಕಲೆಗಳು ನೀವು
ಬನ್ನಿ ನನ್ನ ಮುದ್ದು ಮಕ್ಕಳೇ
ಭಾರತದ ಮುಡಿಗೆ ಸಾಧನೆಗಳ ಏರಿಸುವ
ಕಿರೀಟಗಳು ನೀವು
ಶಿಕ್ಷಕರ ಪೂರ್ತಿ ಪಾಠವೇ ನೀವು
ಹಿರಿಯರಿಗೆ ಕಿರಿಯರಿಗೆ
ಅಪ್ಪ ಅಮ್ಮಗಳಿಗೆ ಮುತ್ತು ನೀವು
ಶಾಂತ ಸಾಗರದಂತೆ ಸಾಧಿಸಿ ತೋರಿಸಬೇಕು
ನೀವು
ಬನ್ನಿ ನನ್ನ ಮುದ್ದು ಮಕ್ಕಳೇ
ನೀವು ಜಗಕೆ ಬೆಳಕಿನ ಹೊಳೆ.
ಮಕ್ಕಳ ದಿನಾಚರಣೆಯ ಶುಭಾಶಯಗಳು
ನನ್ನೆಲ್ಲ ಮುದ್ದು ಪುಟಾಣಿಗಳಿಗೆ

ಕವಿಯಿತ್ರಿ:ಶಶಿಕಲಾ.ಕುಂಚಿಗನಾಳ್

