ಮಕ್ಕಳ ಕಲಿಕೆಗೆ ಪಾಲಕರು ಹಾಗೂ ಶಿಕ್ಷಕರ – ಪಾತ್ರ ಮುಖ್ಯ.
ಯಲಗೋಡ ನ.14

ಪಂಡಿತ ಜವಾಹರಲಾಲ ನೆಹರು ಅವರು ಜನ್ಮ ದಿನದ ಸ್ಮರಣಾರ್ಥವಾಗಿ ನವೆಂಬರ್ ೧೪ ರಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಣೆ ಹಾಗೂ ಪಾಲಕರ ಹಾಗೂ ಶಿಕ್ಷಕರ ಮಹಾ ಸಭೆಯಲ್ಲಿ ಪಾಲಕರು, ಶಿಕ್ಷಕರ ಹಾಗೂ ಮಕ್ಕಳ ನಡುವೆ ಹಲವಾರು ವಿಷಯಗಳು ಚರ್ಚೆ ಮಾಡಲಾಯಿತು. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮುಖ್ಯ ವಾಗಿದೆ ಎಂದು ಶಿಕ್ಷಕರಾದ ಮಂಗಳ ಮೇಡಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಎಮ್.ಪಿ.ಎಸ್ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯತ ಹಾಗೂ ಕ್ಷೇತ್ರಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ಸಿಂದಗಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಯಲಗೋಡ ಇವರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಾಲಕರು ಹಾಗೂ ಶಿಕ್ಷಕರ ಮಹಾ ಸಭೆ ನಡೆಯಿತು. ಈ ಸಭೆಯಲ್ಲಿ ವಿನಾಯಕ ಕುಲಕರ್ಣಿ ಹಾಗೂ ಚಿದಾನಂದ ಶಾಸ್ತ್ರಿಯವರು ಮಾತನಾಡಿದರು.

ಹಾಗೂ ಮಹಾ ಸಭೆಯಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ ಹಾಗೂ ಗೈರು ಹಾಜರಾತಿ ಬಗ್ಗೆ ಪರಿಶೀಲನೆ, ಮಕ್ಕಳು ಕಲಿಕಾ ಪ್ರಗತಿ ಪೋಷಕರೊಂದಿಗೆ ಮಕ್ಕಳ ಪ್ರಗತಿ ಬಗ್ಗೆ ಚರ್ಚಿಸಲಾಯಿತು ಹಾಗೂ ವಿವಿಧ ವಿಷಯ ಈ ಸಭೆಯಲ್ಲಿ ಚರ್ಚೆ ಮಾಡಿದರು. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಂತೇಶ ಕೂಟನೂರ ವಹಿಸಿದರು. ಮುಖ್ಯಾಥಿತಿಗಳಾದ ಪತ್ರಕರ್ತರಾದ ಭೀಮಪ್ಪ ಹಚ್ಯಾಳ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ದೊಡ್ಡಮನಿ, ಗ್ರಂಥ ಪಾಲಕರಾದ ಮುರ್ತುಜ ಕುರಿಕಾಯಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು, ಹಾಗೂ ಈ ಕಾರ್ಯಕ್ರಮವನ್ನು ಶಿಕ್ಷಕರಾದ ಸುರೇಶ ಬಡಿಗೇರ ಅವರು ನಿರೂಪಣೆ ಹಾಗೂ ಸ್ವಾಗತಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

