ಸಮಗ್ರ ಪ್ರಶಸ್ತಿ ಭಾಚಿದ ಹಳ್ಳಿ ಎಸ್.ಎನ್.ಡಿ ಶಾಲೆ -ಹುಲ್ಲೂರಿನ ಮಕ್ಕಳ ಸಾಧನೆ.
ಕೊಪ್ಪ ನ.14

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಪ್ಪ ಗ್ರಾಮದಲ್ಲಿ ಹುಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಒಟ್ಟು ೧೧ ಶಾಲೆಗಳ ಮಕ್ಕಳು ಭಾಗವಹಿಸಿದ್ದವು. ಆ ಶಾಲೆಗಳಲ್ಲಿ ಹುಲ್ಲೂರಿನ ಎಸ್ ಎನ್ ಡಿ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳು ಸಮಗ್ರ (ಎಲ್ಲಾ ವಿಭಾಗಾದಲ್ಲು) ಪ್ರಶಸ್ತಿಗಳನ್ನು ಪಡೆದು ಕೊಂಡು ತಾಲೂಕಿಗೆ ಆಯ್ಕೆಯಾಗಿವೆ. ಆಯ್ಕೆಯಾದ ಮಕ್ಕಳ ವಿವರಗಳು ಈ ಕೆಳಗಿನಂತೆ ಇವೆ.

ಈ ಎಲ್ಲ ಪ್ರಶಸ್ತಿಗಳನ್ನು ಪಡೆದ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಮ್.ಎಸ್ ಕೊಪ್ಪ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಹಳ್ಳಿ ಮಕ್ಕಳಿಗಾಗಿಯೇ ಈ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಪಟ್ಟಣದ ಶಿಕ್ಷಣಕ್ಕಿಂತ ಯಾವುದರಲ್ಲಿಯು ಕಮ್ಮಿ ಇಲ್ಲದೆ ಎಲ್ಲಾ ಪ್ರಶಸ್ತಿಗಳನ್ನು ಬಾಚಿಕೊಂಡು ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ರಿಗೆ ಅಬಿನಂದನೆಯನ್ನು ಸಲ್ಲಿಸಿದರು. ಮುಖ್ಯ ಗುರು ಮಾತೆಯಾರಾದ ಶ್ರಿಮತಿ ರೇಖಾ.ಎಮ್ ಎಸ್ ಹಾಗೂ ಎಲ್ಲಾ ಶಿಕ್ಷಕರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

